ಬಳ್ಳಾರಿ: ವಾಲ್ಮಿಕಿ ನಿಗಮದ ಹಣದಲ್ಲಿ ಸಚಿವರು ಲ್ಯಾಂಬೋರ್ಗಿನಿ ಕಾರ್ ಖರೀದಿ ಮಾಡಿದ್ದಾರೆ ಎಂದು ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರದಲ್ಲಿ ತೊಡಗಿದೆ.
Advertisement
ಒಂದು ವೇಳೆ ಭ್ರಷ್ಟಚಾರದಲ್ಲಿ ವರ್ಲ್ಡ್ ಕಪ್ ಇಟ್ರೇ ಕಾಂಗ್ರೇಸ್ ಗೆಲ್ಲುತ್ತೆ.ಈ ಬಾರಿಯ ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ದುಡ್ಡು ಬಳಕೆ ಆಗಿದೆ, ವಾಲ್ಮಿಕಿ ನಿಗಮದ ಹಣದಲ್ಲಿ ಸಚಿವರು ಲ್ಯಾಂಬೋರ್ಗಿನಿ ಕಾರ್ ಖರೀದಿ ಮಾಡಿದ್ದಾರೆ ಎಂದು ಹೇಳಿದರು.
ಇನ್ನೂ ಎಸ್ಇಪಿ ಮತ್ತು ಟಿಎಸ್ಪಿ ಹಣ 20 ಸಾವಿರದ ಮೂನ್ನೂರು ಕೋಟಿ ದುರ್ಬಳಕೆ ಮಾಡಿಕೊಂಡಿದ್ದಾರೆ.ಅಬಕಾರಿ ಶುಲ್ಕ , ನೋಂದಾಣಿ ಶುಲ್ಕ, ಪೇಟ್ರೋಲಿಯಂ ಪ್ರಾಡಕ್ಟ್ಳ ಮೇಲೆ ಎರಡು ಬಾರಿ ಸೆಸ್ ಏರಿಕೆ ಮಾಡಿದ್ದಾರೆ. ಕೇವಲ ಇಲ್ಲಿಗೆ ನಿಲ್ಲಿಸದೆ ಹಾಲಿಂದ ಅಲ್ಕೋಹಾಲ್ ವರೆಗೂ ಬೆಲೆ ಏರಿಕೆ ಮಾಡಿದೆ ಎಂದು ಸರ್ಕಾರದ ನಡೆಯನ್ನು ಕಟುವಾಗಿ ವಿರೋಧಿಸಿದರು.