ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಸಚಿವ ಡಾ. ಹೆಚ್.ಕೆ. ಪಾಟೀಲ ಚಾಲನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ರಾಜೀವಗಾಂಧಿ ನಗರದಲ್ಲಿ ಗೌತಮ ಬುದ್ಧ ಸೇವಾ ಸಮಿತಿ ಗದಗ ಮತ್ತು ವೇರಿಗುಡ್ ಮಾರ್ನಿಂಗ್ ದಿನಪತ್ರಿಕೆ ಬಳಗದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ, ತೃತೀಯ ಜ.ತೋ. ಡಾ.ಸಿದ್ದಲಿಂಗ ಶ್ರೀ ಟ್ರೋಫಿ ಕಬಡ್ಡಿ ಪಂದ್ಯಾವಳಿಗೆ ಕಾನೂನು, ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಕೆ. ಪಾಟೀಲ ಚಾಲನೆ ನೀಡಿದರು.

Advertisement

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಗೌತಮ ಬುದ್ಧ ಸೇವಾ ಸಮಿತಿ ಅಧ್ಯಕ್ಷ ದೇವಪ್ಪ ಎನ್.ಲಿಂಗದಾಳ ವಾಕರಸಾ ಸಂಸ್ಥೆಯ ಉಪಾಧ್ಯಕ್ಷ ಪೀರಸಾಬ ಕೌತಾಳ, ನಗರಸಭೆ ಸದಸ್ಯರಾದ ಎಲ್.ಡಿ. ಚಂದಾವರಿ, ಸುರೇಶ ಕಟ್ಟಿಮನಿ, ಇಮಾಮಸಾಬ ಮೋರಬ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ, ಚಲವಾದಿ ಸಮಾಜದ ಮುಖಂಡರಾದ ಸತೀಶ್ ಎಚ್.ಹೂಲಿ, ದಲಿತ ಯುವ ಸೇನಾ ಸಮಿತಿಯ ಅಧ್ಯಕ್ಷ ವಿಜಯ್ ಎಸ್.ಮುಳಗುಂದ, ಅಶೋಕ ಮಂದಾಲಿ, ಶಾಂತಪ್ಪ ಹೂಗಾರ, ಮಾರುತಿ ಜೋಗದಂಡೇಕರ, ಪ್ರೊ. ಮಲ್ಲೇಶ ಹೊಸೂರು, ಬಸವರಾಜ ಕಡೇಮನಿ, ಎಸ್.ಎನ್. ಬಳ್ಳಾರಿ, ಡೇವಿಡ್ ಗೋವಿನಕೊಪ್ಪ, ಉಮೇಶ ಚಲವಾದಿ, ಮಲ್ಲಿಕಾರ್ಜುನ ಕಲಕಂಬಿ, ಬಸವರಾಜ ಬಾದಾಮಿ, ಸಂತೋಷ ಕುಮಾರ ವಿ.ಕಲ್ಯಾಣ್, ಅಯ್ಯಪ್ಪ ನಾಯ್ಕರ, ಮೌಲಾಸಾಬ ಗುಡಸಲಮನಿ, ರಾಜೇಶ ಕಟ್ಟಿಮನಿ, ಅಜಯಕುಮಾರ ಕಲಾಲ, ಪ್ರಕಾಶ ಕೇಲೂರು, ಬಿ.ಸಿ. ಹಿರೇಹಾಳ, ಶಿದ್ದಪ್ಪ ಎನ್.ಲಿಂಗದಾಳ, ಶ್ರೀನಿವಾಸ್ ಹುಯಿಲಗೋಳ, ಡಿ.ಟಿ. ವಾಲ್ಮೀಕಿ, ಮಹೇಶ ಕುಚಬಾಳ, ವೆಂಕಟೇಶಯ್ಯ, ರಮೇಶ ಬಾಳಮ್ಮನವರ, ಉಮೇಶ ಚಲವಾದಿ, ವಸಂತ ಕಲಕಂಬಿ, ಮನೋಹರ ಸಿಂಗಾಡಿ, ಲಕ್ಷ್ಮಣ ಸಣ್ಣಕ್ಕಿ, ಬಸವರಾಜ ಸತ್ಯಮ್ಮನವರ, ಅರುಣ ಅಸೂಟಿ ಉಪಸ್ಥಿತರಿದ್ದರು.

ಡೇನಿಯಲ್ ಗೋವಿಕೊಪ್ಪ ಸ್ವಾಗತಿಸಿದರು. ಮಂಜುನಾಥ ಲಿಂಗದಾಳ ನಿರೂಪಿಸಿದರು. ಅಜಯಕುಮಾರ ಲಿಂಗದಾಳ ವಂದಿಸಿದರು.


Spread the love

LEAVE A REPLY

Please enter your comment!
Please enter your name here