ವಿಜಯಸಾಕ್ಷಿ ಸುದ್ದಿ, ಮುಳಗುಂದ: ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಸಚಿವ ಎಚ್.ಕೆ. ಪಾಟೀಲ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮುಳಗುಂದ ಪಟ್ಟಣದ ಪರವಾಗಿ ಅಂಜುಮನ್ ಸಂಸ್ಥೆಯ ಸದಸ್ಯರು, ಅಧ್ಯಕ್ಷರಾದ ತಾಜುದ್ದೀನ ಕಿಂಡ್ರಿ ಸಚಿವರಿಗೆ ಗೌರವ ಸನ್ಮಾನ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎ.ಡಿ. ಮುಜಾವರ, ಹೈದರ ಖವಾಸ, ಮುನ್ನಾ ಡಾಲಾಯತ, ದಾವೂದ ಜಮಾಲ್, ದಾವಲಸಾಬ ಲಕ್ಷ್ಮೇಶ್ವರ, ಮಾಬುಲಿ ದುರ್ಗಿಗುಡಿ, ಖಲಂದರ ಗಾಡಿ, ಹುಸೇನ ಅಕ್ಕಿ, ಪ್ರಕಾಶ ನಡಗೇರಿ, ಇಸ್ಮಾಯಿಲ್ ಜಮಾಲಸಾಬನವರ, ಗೌಸ ಡಾಲಾಯತ, ಖಲೀಫನವರ, ಅಶ್ಪಾಕ ನದ್ದೀಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.



