HomeGadag News'ಗ್ಯಾರಂಟಿ' ವಿಳಂಬದ ವಿರುದ್ಧ ಮಾತನಾಡಿದ ಶೆಟ್ಟರ್’ಗೆ ಸಚಿವ ಎಚ್ ಕೆ ಪಾಟೀಲ್ ತಿರುಗೇಟು!

‘ಗ್ಯಾರಂಟಿ’ ವಿಳಂಬದ ವಿರುದ್ಧ ಮಾತನಾಡಿದ ಶೆಟ್ಟರ್’ಗೆ ಸಚಿವ ಎಚ್ ಕೆ ಪಾಟೀಲ್ ತಿರುಗೇಟು!

For Dai;y Updates Join Our whatsapp Group

Spread the love

ಗದಗ: ಗೃಹ ಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗದ ಕುರಿತು ಸಂಸದ ಜಗದೀಶ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಎಚ್ ಕೆ ಪಾಟೀಲ್ ತಿರುಗೇಟು ನೀಡಿದ್ದಾರೆ.

ಗದಗನಲ್ಲಿ ಮಾತನಾಡಿದ ಅವರು, ಯಾರಾದ್ರೂ ಏನಾದ್ರೂ ಅಂದ್ರೆ ಸುಮ್ಮನಿರಬಹುದು. ಆದರೆ ಬರಗಾಲ ಬಿದ್ದು ನಾವು ಸುಪ್ರೀಂಕೋರ್ಟ್ ಗೆ ಹೋದಾಗಲೂ ಸಹಿತ ಪರಿಹಾರ ನೀಡದೇ ಇರೋರು ನೀವು. ಎರಡು ತಿಂಗಳ ತಡ ಆಗಿದ್ದಕ್ಕೆ ಸರ್ಕಾಕ್ಕೆ ನೀವೇನು ಹಂಗಾತು ಹಿಂಗಾತು ಅನ್ನೋದಕ್ಕೆ ನೈತಿಕ ಹಕ್ಕಿದೆ.

ಕರ್ನಾಟಕದ ಜನರ ಬಗ್ಗೆ ನಿಮಗೆ ಕಾಳಜಿ ಇದ್ರೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಯ್ತಲ್ಲ. ಯುಪಿ, ಬಿಹಾರಕ್ಕೆ ಎಷ್ಟು ಬರುತ್ತೆ. ಅದಕ್ಕೆ ದ್ವನಿ ಎತ್ತಿ, ಯಾಕೆ ಧ್ವನಿ ಎತ್ತಲು ಆಗ್ತಾ ಇಲ್ಲ..? ನೀವು ಕರ್ನಾಟಕದ ಹಿತ ಕಾಪಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಗ್ಯಾರಂಟಿ ಯೋಜನೆ ವಿಳಂಭವಾಗಿದ್ರೆ ಸರಿ ಮಾಡುತ್ತೇವೆ. ಟೆಕ್ನಿಕಲ್ ಕಾರಣದಿಂದ ವಿಳಂಭವಾಗಿರಬಹುದು. ಹೇಗೆ ಸಂಬಳ 1 ನೇ ತಾರೀಖು ಬರುತ್ತದೋ ಹಾಗೇ ರೆಗ್ಯುಲರ್ ಆಗಿ ಬರುವಂತೆ ಮಾಡ್ತೇವೆ ಎಂದು ಶೆಟ್ಟರ್‌ಗೆ ತಿರುಗೇಟು ನೀಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!