ಗದಗ:-ಗದಗ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮೈನ್ಸ್ ಅಧಿಕಾರಿಗೆ ಸಚಿವ ಎಚ್ ಕೆ ಪಾಟೀಲ್ ಅವರು ತೀವ್ರ ಕ್ಲಾಸ್ ತೆಗೆದುಕೊಂಡ ಘಟನೆ ಜರುಗಿದೆ.
ತಮ್ಮ ಅಹವಾಲು ಸಲ್ಲಿಸುವ ವೇಳೆ ರೈತರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಾವಿತ್ರಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
30 ವರ್ಷದ ಹಿಂದೆ ನಡೆದಿದ್ದ ಗಣಿಗಾರಿಕೆ ಬಗ್ಗೆ ಈಗ ಕೇಸ್ ಹಾಕಿರುವ ಬಗ್ಗೆ ರೈತರು ಆರೋಪಿಸಿದ್ದಾರೆ. ಅಲ್ಲದೇ ದುಂದೂರು, ಶ್ಯಾಗೋಟಿ, ಚಿಕ್ಕಹಂದಿಗೋಳ ವ್ಯಾಪ್ತಿಯ ರೈತರಿಗೆ ಕೇಸ್ ಹಾಕಿ ಕಿರುಕುಳ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರೈತರ ದೂರು ಕೇಳುತ್ತಿದ್ದಂತೆ ಸಚಿವ ಎಚ್ ಕೆ ಪಾಟೀಲ್ ಅವರು ಅಧಿಕಾರಿ ವಿರುದ್ಧ ಗರಂ ಆಗಿದ್ದಾರೆ. ನೀನೇನು ಲಂಚ ತೆಗೆದುಕೊಳ್ಳೊದಕ್ಕೆ ಇಲ್ಲಿದ್ದೀಯಾ ಎಂದು ಆಕ್ರೋಶ ಹೊರ ಹಾಕಿದ್ದು, ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಅಂತಾ ಡಿಸಿ ಗೋವಿಂದರೆಡ್ಡಿ ಅವರಿಗೆ ಸೂಚನೆ ಕೊಟ್ಟಿದ್ದಾರೆ.
ದೂರುದಾರರ ಎದುರೇ ಅಧಿಕಾರಿ ಸಾವಿತ್ರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡಿದ್ದು, ವರದಿ ತರೆಸಿಕೊಂಡು ಕ್ರಮ ಕೈಗೊಳ್ಳುವಂತೆ ಡಿಸಿ ಗೋವಿಂದರೆಡ್ಡಿಗೆ ಸೂಚನೆ ಕೊಟ್ಟಿದ್ದಾರೆ.