ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮುಳಗುಂದ ಪಟ್ಟಣ ಪಂಚಾಯಿತಿ ನಾಮನಿದೇರ್ಶಕ ಸ್ಥಾನಕ್ಕೆ ಪಟ್ಟಣದ ಸಮಾಜ ಸೇವಕ ದಾವೂದ್ ಜಮಾಲಸಾಬನವರ ಅವರು ಆಯ್ಕೆಯಾಗಿದ್ದು, ನಾಮನಿರ್ದೇಶಕ ಸ್ಥಾನಕ್ಕೆ ಶಿಪಾರಸು ಮಾಡಿದ ಸಚಿವ ಡಾ. ಎಚ್.ಕೆ. ಪಾಟೀಲರಿಗೆ ಪಟ್ಟಣದ ಹಿರಿಯ ಮುಖಂಡರು ಸನ್ಮಾನಿಸಿದರು.
Advertisement
ಈ ಸಂದರ್ಭದಲ್ಲಿ ಧರ್ಮಗುರುಗಳಾದ ಮಹ್ಮದಿಸ್ಮಾಯಿಲ್ ಖಾಜಿ, ಇಮಾಮಸಾಬ ಖವಾಸ, ಎಚ್.ಎಂ. ನದ್ದೀಮುಲ್ಲಾ, ತಾಜುದ್ದೀನ ಕಿಂಡ್ರೀ, ಹಮೀದ ಮುಜಾವರ, ರಫೀಕ ದಲೀಲ, ಚಮನಸಾಬ ಹಾದಿಮನಿ, ಹೈದರ ಖವಾಸ, ಮುನ್ನಾ ಢಾಲಾಯತ್, ದಾವೂದ ಜಮಾಲ್, ಮಾಬುಲಿ ದುರ್ಗಿಗುಡಿ, ಜಿಲಾನಿ ಶೇಖ್, ನಜೀರ ಢಾಲಾಯತ್, ಹುಸೇನ ಅಕ್ಕಿ, ಹೈದರ ಶೇಖ್ ಇತರರು ಹಾಜರಿದ್ದರು.