ನವದೆಹಲಿ: ಸಚಿವ ಈಶ್ವರ ಖಂಡ್ರೆ ಮಾನಸಿಕ ರೋಗಿ ಇದ್ದಂತೆ ಇದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅನುಭವ ಮಂಟಪ ಪೀರ್ ಸಾಬ್ ದರ್ಗಾ ಆಗಿದೆ. ಇವರಿಗೆ ತಾಕತ್ತಿದ್ದರೆ ಪೀರ್ ಸಾಬ್ ದರ್ಗಾ ತೆರವು ಮಾಡಬೇಕು. ಸೋಕಾಲ್ಡ್ ಲಿಂಗಾಯತ ನಾಯಕರು ಇದ್ದಾರಲ್ಲ ತೆರವು ಮಾಡಿಸಲಿ.
ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ, ಬಿಎಸ್ ಯಡಿಯೂರಪ್ಪ, ಈಶ್ವರ ಖಂಡ್ರೆ ಪೀರ್ ಸಾಬ್ ದರ್ಗಾ ತೆರವುಮಾಡಿಲಿ. ಸಚಿವ ಈಶ್ವರ ಖಂಡ್ರೆ ಅವರು ಸರ್ಕಸ್ನಲ್ಲಿರುವ ಜೋಕರ್ ತರ ಇದ್ದಾರೆ. ಸಚಿವ ಈಶ್ವರ ಖಂಡ್ರೆ ಮಾನಸಿಕ ರೋಗಿ ಇದ್ದಂತೆ ಇದ್ದಾರೆ ಎಂದು ವಾಗ್ದಾಳಿ ಮಾಡಿದರು.
ಇನ್ನೂ ಹೊಂದಾಣಿಕೆ ರಾಜಕಾರಣ ಇರಬಾರದೆಂದು ವರಿಷ್ಠರೇ ಹೇಳಿದ್ದಾರೆ. ಇದು ಜನಪರ ಹೋರಾಟ, ಅವರದ್ದು ಕುಟುಂಬಶಾಹಿ ಹೋರಾಟ. ಅವರದ್ದು ಹೋರಾಟ ಅಲ್ಲ, ಪತ್ರಿಕಾಗೋಷ್ಠಿ ಅಷ್ಟೇ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ ಎಂದು ವಾಗ್ದಾಳಿ ಮಾಡಿದರು.