ದಾವಣಗೆರೆ:- ರೈತರ ಭೂಮಿ, ಹಿಂದೂಗಳ ಸ್ಮಶಾನ ಮತ್ತು ಮಠಮಾನ್ಯಗಳ ಜಾಗಗಳನ್ನು ಕಬಳಿಸಲು ಹುನ್ನಾರ ಮಾಡಿರುವ ವಕ್ಫ್ ಸಚಿವ ಜಮೀರ್ ಅಹ್ಮದ್ ಒಬ್ಬ ಮತಾಂಧ ಎಂದು ಬಿಜೆಪಿ ಮುಖಂಡ ಎಂಪಿ ರೇಣುಕಾಚಾರ್ಯ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಈ ಸಂಬಂಧ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ಒಬ್ಬ ಮತಾಂದ. ನನಗೊಂದು ಕಾಡುತ್ತಿರುವ ಪ್ರಶ್ನೆ ಜಮೀರ್ ಅಹ್ಮದ್ ಅಲ್ಪಸಂಖ್ಯಾತರ ಸಚಿವರಾ..? ರಾಜ್ಯಕ್ಕೆ ಸಂಬಂಧಿಸಿದ ಸಚಿವರಾ..? ಎಂದು ಪ್ರಶ್ನಿಸಿದರು.
ಇನ್ನೂ ಉಪ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಕನ್ಫರ್ಮ್. ನಂತರ ಈ ಸರ್ಕಾರ ಬಹಳ ದಿನಗಳ ಕಾಲ ಉಳಿಯಲ್ಲ ಸರ್ಕಾರ ಪತನ ಆಗುತ್ತೆ. ಆಗ ಜಮೀರ್ ಅಹಮದ್ ಅವರನ್ನ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ. ಮಿಸ್ಟರ್ ಜಮೀರ್ ಅಹ್ಮದ್ ನಿಮ್ಮನ್ನ ವಜಾ ಮಾಡದಿದ್ದರೆ ಈ ಸರ್ಕಾರ ವಜಾ ಮಾಡುವ ಶಕ್ತಿ ಜನರಿಗೆ ಇದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹಿಂದೂ ಸ್ಮಶಾನಗಳು ಮಠಗಳ ಆಸ್ತಿಯನ್ನ ಕಬಳಿಸಲು ನೋಟಿಸ್ ಕೊಟ್ಟಿದ್ದಾರೆ. ಆದರೆ ಬಿಜೆಪಿ ಪಕ್ಷದ ಹೋರಾಟದ ಫಲವಾಗಿ ನೋಟಿಸ್ ವಾಪಸ್ ಪಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೆರೆಗೆ ವಕ್ಫ ಬೋರ್ಡ್ ಮೀಟಿಂಗ್ ಮಾಡಿ ಜಿಲ್ಲಾಧಿಕಾರಿಗಳಿಗೆ ಎಸಿ ಗಳ ಮೂಲಕ ನೋಟಿಸ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ 1 ಲಕ್ಷ ಎಕರೆ ಹಿಂದೂ ಭೂಮಿ ಕಬಳಿಸಿದ್ದಾರೆ. ಅಲ್ಪ ಸಂಖ್ಯಾತರ ತುಷ್ಟಿಕರಣಕ್ಕೆ ಪಿ ನರಸಿಂಹರಾವ್ ವಕ್ಪ ಬೋರ್ಡ್ ಜಾರಿಗೆ ತಂದರು. ಹಿಂದೂಗಳಿಗೆ ವಿನಂತಿ ಮಾಡ್ತೀನಿ ಎಲ್ಲರೂ ಪತ್ರ ಚಳುವಳಿ ಮಾಡಬೇಕು. ನಾನು ಮೋದಿಗೆ ಪತ್ರ ಬರೆದಿದ್ದೇನೆ ವಕ್ಫ ಬೋರ್ಡ್ ವಜಾ ಮಾಡಬೇಕು ನೀವು ಎಲ್ಲರೂ ಪತ್ರ ಬರೆಯಿರಿ.
ದೇವಸ್ಥಾನ ಕಟ್ಟಲು ಒಂದು ಗುಂಟೆ ಜಾಗ ಕೊಡಲು ಅಧಿಕಾರಿಗಳಿಗೆ ಮೀಟರ್ ಇಲ್ಲ. ಏಕಾಏಕಿ ಹಿಂದೂಗಳ ಭೂಮಿಗಳನ್ನ ಕೊಡುತಿದ್ದಾರೆ. ನರೇಂದ್ರ ಮೋದಿಗೆ ಪತ್ರ ಬರೆದಿದ್ದೇವೆ. ಎಲ್ಲರೂ ವಕ್ಫ್ ರದ್ದು ಮಾಡಬೇಕು ಎನ್ನುತ್ತಿದ್ದಾರೆ. ಶಾಲಾ ಕಾಲೇಜು ಕಟ್ಟಲು ಜಾಗ ಇಲ್ಲ. ಬಡವರಿಗೆ ನಿವೇಶನ ಕೊಡಲು ಜಾಗ ಇಲ್ಲ ವಕ್ಫ್ ಗೆ ಜಾಗ ಕೊಡ್ತಾರೆ. ವಕ್ಫ್ ಕಬಳಿಸಿದ ಆಸ್ತಿಯನ್ನ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲು ಅವಕಾಶ ಇಲ್ಲ.
ಮುಖ್ಯಮಂತ್ರಿಗಳಿಗೆ ಕೇಳ್ತೀನಿ ಅಲ್ಪ ಸಂಖ್ಯಾತರಿಗಾಗಿ ನೀವು ಅಧಿಕಾರಕ್ಕೆ ಬಂದಿದ್ದು!? ಎಂದು ಪ್ರಶ್ನಿಸಿದರು. ಹಿಂದೂಗಳಿಗೆ ಕರೆ ಕೊಡ್ತೀವಿ ಎಲ್ಲರೂ ನರೇಂದ್ರ ಮೋದಿಗೆ ಬೆಂಬಲ ಕೊಡಿ. ದಿನಾಂಕ 4 ರಂದು ಹಿಂದೂಗಳ ಆಸ್ತಿ ಕಬಳಿಸಿದ ವಕ್ಫ್ ವಿರುದ್ಧ ಹೋರಾಟ ಇದೆ. ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡುವಂತೆ ಮಾಜಿ ಸಚಿವ ರೇಣುಕಾಚಾರ್ಯ ಕರೆ ಕೊಟ್ಟಿದ್ದಾರೆ.
ಇದೆ ವೇಳೆ ವಕ್ಫ್ ಬ್ಯಾನ್ ಮಾಡಲು ಪತ್ರ ಚಳುವಳಿಗೆ ಚಾಲನೆ ಕೊಟ್ಟಿದ್ದಾರೆ.