ತುಮಕೂರು: ಮಧುಗಿರಿಯ ಚೋಳೆನಹಳ್ಳಿ ಕೆರೆಯಲ್ಲಿ ಬೋಟಿಂಗ್ ಗೆ ಸಚಿವ ಕೆಎನ್ ರಾಜಣ್ಣರಿಂದ ಚಾಲನೆ ನೀಡಲಾಗಿದ್ದು, ನಂತರ ಬೋಟಿಂಗ್‌ನಲ್ಲಿ ತನ್ನ ಬೆಂಬಲಿಗರ ಜೊತೆ ಜಾಲಿ ರೈಡ್ ಮಾಡಿದ್ದಾರೆ. ಕೆರೆ ಪ್ರವಾಸಿ ತಾಣವಾಗಿ ಮಾರ್ಪಡಿಸುವ ಹಿನ್ನೆಲೆಯಲ್ಲಿ ಬೋಟಿಂಗ್‌ಗೆ ರಾಜಣ್ಣ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಚೋಳೇನಹಳ್ಳಿ ಕೆರೆಯಲ್ಲಿ ನೀರು ಕಡಿಮೆಯಾದಾಗ ಕೆರೆ ಏರಿ ಹಾಗೂ ಹೂಳನ್ನು ಎತ್ತಿಸಲಾಗುವುದು. ಈ ಕೆರೆ ನೋಡಲು ಸುಂದರವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಕೆರೆಯಲ್ಲಿ ಶಾಶ್ವತವಾಗಿ ದೋಣಿ ವಿಹಾರದ ವ್ಯವಸ್ಥೆ ಮಾಡಿಸಲಾಗುವುದು ಎಂದು ತಿಳಿಸಿದರು.



