ಲಿಫ್ಟ್‌ನಲ್ಲಿ ಸಿಲುಕಿದ ಸಚಿವ ರಾಮಲಿಂಗಾರೆಡ್ಡಿ: ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ ಪರದಾಟ!

0
Spread the love

ಬೆಂಗಳೂರು:- ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ ಸಚಿವ ರಾಮಲಿಂಗಾ ರೆಡ್ಡಿ 10 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿದ ಘಟನೆ ಜರುಗಿದೆ.

Advertisement

ನೆಲಮಹಡಿಯಿಂದ ಲಿಫ್ಟ್‌ನಲ್ಲಿ ಹೋಗುವ ವೇಳೆ ಸಚಿವ ರಾಮಲಿಂಗಾರೆಡ್ಡಿ, ಹೊಸೂರು ಶಾಸಕ ಪ್ರಕಾಶ್ ಸೇರಿ ಸುಮಾರು ಹತ್ತು ಮಂದಿ ಇದ್ದ ಲಿಫ್ಟ್ ಕೆಟ್ಟು ನಿಂತು ಕೆಲಕಾಲ ಪರದಾಟ ನಡೆಸಿದರು. ಸುಮಾರು 10 ನಿಮಿಷಗಳ ಕಾಲ ಸಚಿವರು ಹಾಗೂ ಶಾಸಕರು ಲಿಫ್ಟ್‌ನಲ್ಲಿ ಸಿಲುಕಿದ್ದಾರೆ.

ಘಟನೆಯಿಂದ ಕೆಲಹೊತ್ತು ಆಸ್ಪತ್ರೆಯ ಆವರಣ ಗೊಂದಲಕ್ಕೀಡಾಗಿತ್ತು. ಬಳಿಕ ಲಿಫ್ಟ್ ಆಪರೇಟರ್ ಸಹಾಯದಿಂದ ಡೋರ್ ಓಪನ್ ಮಾಡಲಾಯಿತು. ತದನಂತರ ರಾಮಲಿಂಗಾ ರೆಡ್ಡಿ ಆಸ್ಪತ್ರೆ ಉದ್ಘಾಟಿಸಿ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here