ಬೆಂಗಳೂರು: ಭಯೋತ್ಪಾದಕ ದಾಳಿಗೆ ಪಹಲ್ಗಾಮ್‌ನ ಪ್ರವಾಸಿಗರಲ್ಲಿ 28 ಮಂದಿ ಹತ್ಯೆಯಾಗಿದ್ದಾರೆ. ಈ ಪೈಕಿ ಇಬ್ಬರು ಕನ್ನಡಿಗರು ಹಾಗೂ ವಿದೇಶಿಗರೂ ಇದ್ದಾರೆ. ಿನ್ನೂ ಕನ್ನಡಿಗರ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪಹಲ್ಗಾಮ್ ಗೆ ಸಂತೋಷ್ ಲಾಡ್ ಅವರು ಬಂದಿಳಿದಿದ್ದಾರೆ.
ಬೆಳಗ್ಗಿನಿಂದಲೇ ಲಾಡ್ ಅವರು ಮೃತದೇಹವನ್ನು ಇರಿದಿರುವ ಸ್ಥಳಗಳಿಗೆ ತೆರಳಿ ಮೃತದೇಹ ಗುರುತಿಸಲು ಸಂಬಂಧಿಕರಿಗೆ ಸಹಾಯ ಮಾಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕದಿಂದ ತೆರಳಿದ್ದ ಮೂವರು ಪ್ರವಾಸಿಗರರು ಕೊಲ್ಲಲ್ಪಟ್ಟಿದ್ದಾರೆ. ಹಾಗೂ ಕೆಲವರು ಗಾಯಗೊಂಡಿದ್ದಾರೆ. ಈ ಕುರಿತಾದ ಎಲ್ಲ ವಿವರಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಲಾಡ್ ನೀಡಿದರು.
ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಮಾತನಾಡಿದ ಲಾಡ್ ಅವರು, ರಕ್ಷಣಾ ಕಾರ್ಯದ ಬಗ್ಗೆ ವಿವರಣೆ ನೀಡಿದರು. ಹಾಗೂ ಮೃತ ದೇಹಗಳನ್ನು ರಾಜ್ಯಕ್ಕೆ ಸಾಗಿಸುವ ನಿಟ್ಟಿನಲ್ಲಿ ನೆರವನ್ನು ಕೋರಿದರು. ಅಲ್ಲದೆ ಗಾಯಾಳುಗಳಿಗೂ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೆರವನ್ನು ಕೋರಿದರು.