ಬೆಂಗಳೂರು: ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಮತ್ತೊಮ್ಮೆ, ಹನಿಟ್ರ್ಯಾಪ್ ಎಂಬ ಭೂತ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಯಾಕಂದ್ರೆ ಹಿಂದಿನ ಹನಿಟ್ರ್ಯಾಪ್ ಪ್ರಕರಣಗಳು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟಗೆ ಸದ್ದು ಮತ್ತು ಸುದ್ದಿ ಮಾಡಿದ್ದವು.
ಇದೀಗ ಅದೇ ರೀತಿಯ ಮತ್ತೊಂದು ಹನಿಟ್ರ್ಯಾಪ್, ರಾಜಕೀಯ ಪಡಸಾಲೆಯಲ್ಲಿ ಗುಲ್ಲೇಬಿಸಿದೆ. ಇದರ ಬೆನ್ನಲ್ಲೇ ಭಾವಿ ಸಚಿವರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಆಗಿದ್ದು, ಸಚಿವರ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಭಾವಿ ಸಚಿವರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಆಗಿದ್ದು, ಸಚಿವರ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ. ಹನಿಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂದ್ರೆ ಆರೋಪಿಸಿದಂತಾಗುತ್ತೆ. ಅದು ರಾಜಕೀಯ ಆರೋಪ ಮಾಡಿದಂತಾಗುತ್ತೆ. ಹನಿಟ್ರ್ಯಾಪ್ ಯತ್ನ ಅಂತು ನಡೆದಿದೆ ಎಂದು ಖಚಿತಪಡಿಸಿದರು.
ಸಚಿವರು ದೂರು ಕೊಟ್ಟರಷ್ಟೇ ಅದು ಅಧಿಕೃತ. ಹನಿಟ್ರ್ಯಾಪ್ ಯಾರು ಮಾಡುತ್ತಿದ್ದಾರೆಂದು ಎಲ್ಲರಿಗೂ ಗೊತ್ತು. ಹನಿಟ್ರ್ಯಾಪ್ ಮಾಡುವುದಕ್ಕೆಂದೇ ಒಂದು ತಂಡ ಇದೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಎಲ್ಲ ಪಕ್ಷದವರೂ ಚರ್ಚಿಸಬೇಕಾದ ವಿಷಯ ಎಂದಿದ್ದಾರೆ.