ಬಾಗಲಕೋಟೆ: ಕಂಕನವಾಡಿ ಗ್ರಾಮದ ರೈತರು ಕಟ್ಟಿಸಿದ ಸೇತುವೆಯನ್ನು ಸಚಿವ ತಿಮ್ಮಾಪುರ ಉದ್ಘಾಟಿಸಿದರು. ಕೃಷ್ಣಾ ನದಿಗೆ ಬ್ಯಾರಲ್ಗಳ ಮೂಲಕ ತೇಲು ಸೇತುವೆ ನಿರ್ಮಾಣ ಮಾಡಿದ್ದರು. ರೈತರು ಒಟ್ಟುಗೂಡಿ ಒಂದುವರೆ ತಿಂಗಳ ಕಾಲ ಶ್ರಮಿಸಿ ಕಟ್ಟಿಸಿದ ಸೇತುವೆ ಇದಾಗಿದೆ. ಬಳಿಕ ಮಾತನಾಡಿದ ಸಚಿವರು,
ಎಲ್ಲ ರೈತರು ಸೇರಿ ಇಂತಹ ಅದ್ಭುತ ಕೆಲಸ ಮಾಡಿದಾರೆ. ಅವರಿಗೆ ಎಷ್ಟೇ ಅಭಿನಂದನೆ ಹೇಳಿದರು ಕಡಿಮೆ. ರೈತರು ನಮ್ಮ ಸರಕಾರ ಕಣ್ಣು ತೆರೆಸುವ ಕೆಲಸ ಮಾಡಿದಾರೆ. ಆದಷ್ಟು ಶೀಘ್ರದಲ್ಲೇ ಶಾಸ್ವತ ಸೇತುವೆ ಮಾಡಲು ನಾವು ಪ್ರಯತ್ನ ಮಾಡುತ್ತೇವೆ. ಇದೆಲ್ಲ ಗಮನಿಸಿ ನಾವು ಪೂರಕವಾಗಿ ರೈತರ ಜೊತೆ ನಿಲ್ಲುತ್ತೇವೆ ಎಂದರು.



