ಅರ್ಜುನ ಸಮಾಧಿ ಸ್ಥಳಕ್ಕೆ ಸಚಿವರು ಭೇಟಿ: ಶ್ರದ್ಧಾಂಜಲಿ ಸಲ್ಲಿಕೆ

0
Spread the love

ಹಾಸನ: ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಸಕಲೇಶಪುರ ತಾಲ್ಲೂಕಿನ ಯಸಳೂರು ದಬ್ಬಳಿ ಕಟ್ಟೆ ನೆಡುತೋಪುನಲ್ಲಿ ಆನೆ ಕಾರ್ಯಾಚರಣೆ ವೇಳೆ ಕಾಡಾನೆಯೊಂದಿಗೆ ಹೊರಾಟ ಮಾಡಿ ಮೃತಪಟ್ಟ ಆನೆ ಅರ್ಜುನ ಸಮಾಧಿ ಸ್ಥಳಕ್ಕೆ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತ ಅರ್ಜುನ ಮೃತಪಟ್ಟಿರು ವುದು ಅತ್ಯಂತ ದುಃಖದ ಸಂಗತಿ ಎಂದರು. ಕಾರ್ಯಾಚರಣೆ ವೇಳೆ ಕಾಡಾನೆ ಹಿಮ್ಮೆಟ್ಟಿಸಲು ಅರ್ಜುನ ಹೊರಾಡಿ ತಾನು ಮೃತಪಟ್ಟು ಉಳಿದವರ ಜೀವ ಉಳಿಸಿದ್ದಾನೆ ಎಂದು ಸ್ಮರಿಸಿದರು.

Advertisement

ನ.24 ರಿಂದ ಆನೆ ಹಿಮ್ಮೆಟ್ಟಿಸಲು ಕಾರ್ಯಾಚರಣೆ ನಡೆಸಲಾಗುತ್ತಿತ್ತು ಯಾರು ಈ ದುರ್ಘಟನೆ ನೀರಿಕ್ಷೆ ಮಾಡಿರಲ್ಲಿ ಲ್ಲ ಕೆಲವು ಸಣ್ಣಪುಟ್ಟ ಲೋಪದೋಷವಾಗಿದೆ ಇದನ್ನು ಸಮಗ್ರ ತನಿಖೆಗೆ ನಿವೃತ್ತ ಮುಖ್ಯ ವನಪಾಲಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. 15 ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡುತ್ತಾರೆ. ಪಾರದರ್ಶಕವಾದ ತನಿಖೆ ಆಗುತ್ತದೆ ಎಂದು ತಿಳಿಸಿದರು. ಆನೆ ಸಂಸ್ಮರಣೆಗಾಗಿ ಈ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡುವುದರ ಜೊತೆಗೆ ಅರ್ಜುನ ವಾಸವಿದ್ದ ಮೈಸೂರಿನ ನಾಗರಹೊಳೆ ಶಿಬಿರದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಅರ್ಜುನ ಅಂಬಾರಿ ಹೊತ್ತ ಹಾಗೂ ಅನೇಕ ಕಾರ್ಯಾಚರಣೆಗಳಲ್ಲಿ ಭಾಗವಹಿಸಿರುವ ಮಾಹಿತಿಗಳನ್ನು ಪ್ರದರ್ಶನ ಮಾಡುವ ಮೂಲಕ ಶಾಶ್ವತವಾಗಿ ಉಳಿಯುವಂತೆ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದರು.


Spread the love

LEAVE A REPLY

Please enter your comment!
Please enter your name here