ಫುಟ್‌ಬಾಲ್ ತರಬೇತಿ ಶಿಬಿರಕ್ಕೆ ಸಚಿವರ ಭೇಟಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಸಿಟಿ ಪುಟಬಾಲ್ ಕ್ಲಬ್ ವತಿಯಿಂದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿರುವ 5ರಿಂದ 18 ವರ್ಷದ ಬಾಲಕ, ಬಾಲಕಿಯರ ಫುಟ್‌ಬಾಲ್ ಬೇಸಿಗೆ ತರಬೇತಿ ಶಿಬಿರಕ್ಕೆ ಗುರುವಾರ ಸಾಯಂಕಾಲ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅನಿರೀಕ್ಷತ ಭೇಟಿ ನೀಡಿ ತರಬೇತಿ ಶಿಬಿರವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

Advertisement

ಈ ಅನಿರೀಕ್ಷಿತ ಭೇಟಿ ನಮಗೆ ಸಂತಸ ತಂದಿದೆ. ಸಚಿವರ ಪ್ರೇರಣೆಯ ಮಾತುಗಳು ತರಬೇತಿದಾರರಲ್ಲಿ ಮತ್ತು ಕ್ರೀಡಾಪಟುಗಳಲ್ಲಿ ದೊಡ್ಡ ಕನಸುಗಳನ್ನು ಬಿತ್ತಿದೆಯಲ್ಲದೆ, ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯಿಂದ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವಂತೆ ತರಬೇತಿ ನೀಡಲಾಗುವುದೆಂದು ಗದಗ ಸಿಟಿ ಫುಟಬಾಲ್ ಕ್ಲಬ್ ಅಧ್ಯಕ್ಷರು ಹಾಗೂ ಮುಖ್ಯ ತರಬೇತಿದಾರರಾದ ಸ್ಯಾಮಸನ್ ಡೆನಿಸ್ ಡಾನ್, ಶಶಿಕುಮಾರ ಮುಂಡರಗಿ, ರಾಘವೇಂದ್ರ ಮುಂಡರಗಿ, ರಿಚರ್ಡ್ ಎಂ.ಧರ್ಮದಾಸ್, ಎಡ್ವರ್ಡ್ ಎಂ.ಧರ್ಮದಾಸ್, ಅಗಸ್ಟಿನ್ ಜಾನ್ ವಿಶ್ವಾಸ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here