ಮೈಸೂರು: ಡಿಕೆ ಸಿಎಂ ಆಗಬಾರದು ಅಂತ ಸಚಿವರುಗಳಿಂದ ಡಿನ್ನರ್ ಮೀಟಿಂಗ್ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನದು ಸಿಂಹಪಾಲು ಅಂತ ಡಿಕೆ ಇದ್ದಾರೆ. ಸಿಎಂ ಆಗ್ಬೇಕು ಅಂತ ಕನಸು ಕಾಣುತ್ತಿದ್ದಾರೆ.
Advertisement
ಸಿದ್ದರಾಮಯ್ಯ ಇಳಿಸಲು ಬಡಿಗೆ ಕುಡುಗೋಲು ತರುತ್ತಾರೆ. ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ಡಿಕೆ ಸಿಎಂ ಆಗಬಾರದು ಅಂತ ಸಚಿವರುಗಳು ತಾವು ಸಿಎಂ ಆಗ್ಬೇಕು ಅಂತ ಡಿನ್ನರ್ ಮೀಟಿಂಗ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಸಿದ್ದರಾಮಯ್ಯ ರಾಜಕೀಯ ಚಾಣಕ್ಯ, ಅವರು ತಮ್ಮ ಅವಧಿ ಮುಗಿಯುತ್ತಿದೆ ಅಂತ ರಾಜಕೀಯ ತಂತ್ರ ಕುತಂತ್ರ ಮಾಡ್ತಿದ್ದಾರೆ. ಡಿಕೆಶಿ ವಿರುದ್ಧ ರಾಜಕೀಯ ದಾಳ ಉರುಳುಸಿದ್ದಾರೆ ಎಂದು ಹೇಳಿದ್ದಾರೆ.