ಬೆಂಗಳೂರು:– ಮನೆ ಪಕ್ಕ ನಿಲ್ಲಿಸಿದ್ದ ಬೈಕ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಘಟನೆ ಡಿ.ಜೆ.ಹಳ್ಳಿ ಬಳಿಯ ವಿಶ್ವೇಶ್ವರಯ್ಯ ನಗರದಲ್ಲಿ ಜರುಗಿದೆ.
Advertisement
ಕಳೆದ 12 ರ ರಾತ್ರಿ 2.41 ರ ಸುಮಾರಿಗೆ ಈ ಘಟನೆ ಜರುಗಿದೆ. ಗೋಪಿ ಎಂಬುವವರ ಬೈಕ್ ಗೆ ಬೆಂಕಿ ಹಾಕಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಗೋಪಿ ಮನೆ ಪಕ್ಕ ಹೊಸ ಬೈಕ್ ನಿಲ್ಲಿಸಿದ್ದ. ರಾತ್ರಿ ವೇಳೆ ಪೆಟ್ರೋಲ್ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಸಿಸಿಟಿವಿಯಲ್ಲಿ ಬೈಕ್ ಗೆ ಬೆಂಕಿ ಹಾಕುವ ದೃಶ್ಯ ಸೆರೆ ಯಾಗಿದೆ. ಡಿ.ಜೆ.ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಡಿ.ಜೆ.ಹಳ್ಳಿ ಠಾಣೆಗೆ ಘಟನೆ ಸಂಬಂಧ ಮಾಲೀಕ ಗೋಪಿ ದೂರು ನೀಡಿದ್ದಾನೆ. ದೂರಿನ ಅನ್ವಯ ಎಫ್ ಐಆರ್ ದಾಖಲಾಗಿದೆ.