ಮಂಡ್ಯ:- ಶನಿ ಮಠಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಬಳಿ ಇರುವ ಶನಿ ಮಠದಲ್ಲಿ ಜರುಗಿದೆ.
Advertisement
ಘಟನೆ ಪರಿಣಾಮ ಬೆಂಕಿಯ ಜ್ವಾಲೆಗೆ ದೇಗುಲ ಹಾಗೂ ಗೋಶಾಲೆ ಹೊತ್ತಿ ಉರಿದಿದೆ. ಮಧ್ಯರಾತ್ರಿ ಶನಿ ಮಠದ ದೇಗುಲಕ್ಕೆ ಬೆಂಕಿ ಹಾಕಿ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ. ಕೂಡಲೇ ಅಲ್ಲಿನ ಸ್ಥಳೀಯರು, ಮಠದಲ್ಲಿದ್ದ ಗೋಶಾಲೆ ಗೋವುಗಳು ಹಾಗೂ ವೃದ್ದಾಶ್ರಮದದ ಜನರನ್ನು ರಕ್ಷಣೆ ಮಾಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇನ್ನೂ ಜಾಗದ ವಿವಾದಕ್ಕೆ ಶನಿ ಮಠಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಶನಿಮಠದ ಸ್ವಾಮೀಜಿ ಹಾಗೂ ಧರ್ಮದರ್ಶಿ ಅವರು ಕಿಡಿಗೇಡಿಗಳ ವಿರುದ್ದ ದೂರು ದಾಖಲಿಸಿದ್ದಾರೆ.
ಕೆ.ಆರ್.ಎಸ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.