ಹಿರಿಯ ನಟಿ ವೈಜಯಂತಿ ಮಾಲಾ ನಿಧನರಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅವರ ಅಭಿಮಾನಿಗಳು ಕಂಗಾಲಾಗಿದ್ದರು. ಇದೀಗ ನಟಿಯ ಪುತ್ರ ಸುಚಿಂದ್ರ ಬಾಲಿ ಅವರು ವದಂತಿಗಳಿಗೆ ಬ್ರೇಕ್ ಹಾಕಿದ್ದು ವೈಜಯಂತಿ ಮಾಲಾ ಆರಾಮಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವೈಜಯಂತಿ ಮಾಲಾ ನಿಧನರಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅವರ ಮಗ ಸುಚೀಂದ್ರ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ವೈಜಯಂತಿ ಕುಟುಂಬಕ್ಕೆ ಆಪ್ತರಾದ ಸಂಗೀತಗಾರ ಗಿರಿಜಾ ಶಂಕರ್ ಸುಂದರೇಶನ್ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಶೇರ್ ಮಾಡಿದ್ದು, ಡಾ. ವೈಜಯಂತಿ ಬಾಲಿ ಆರೋಗ್ಯವಾಗಿದ್ದಾರೆ, ಈಗ ಹರಿದಾಡುತ್ತಿರುವ ವಿಚಾರ ಸುಳ್ಳು. ಸುದ್ದಿ ಹಂಚಿಕೊಳ್ಳುವ ಮುನ್ನ ದಯವಿಟ್ಟು ಒಮ್ಮೆ ಪರಿಶೀಲಿಸಿ ನೋಡಿ. ಸುಳ್ಳು ವದಂತಿಯನ್ನು ಹರಡೋದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಅಂದ್ಹಾಗೇ ತಮಿಳುನಾಡಿದ ಟ್ರಿಪ್ಲಿಕೇನ್ ನಲ್ಲಿ ಹುಟ್ಟಿದ ವೈಜಯಂತಿ ಮಾಲಾಗೆ ಬಣ್ಣದ ನಂಟು ಬಾಲ್ಯದಿಂದಲೇ ಇತ್ತು. ಇವರ ತಾಯಿ ಖ್ಯಾತ ನಟಿ ವಸುಂಧರ ದೇವಿ. ಅಭಿನಯದ ಜೊತೆಗೆ ವೈಜಯಂತಿ ಅದ್ಭುತ ಡ್ಯಾನ್ಸರ್ ಕೂಡ ಹೌದು. 1940ರ ಸಂದರ್ಭದಲ್ಲಿ ಚಿತ್ರರಂಗ ಆಳಿದ ವೈಜಯಂತಿ ಮಾಲಾ ಅವರು ರಾಜ್ ಕಪೂರ್, ದಿಲೀಪ್ ಕುಮಾರ್, ಕಿಶೋರ್ ಕುಮಾರ್ ಹೀಗೆ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡವರು. ತಮಿಳಿನಲ್ಲಿ 2 ಹಿಟ್ ಸಿನಿಮಾ ನೀಡುತ್ತಿದ್ದಂತೆ ಬಾಲಿವುಡ್‌ನಲ್ಲಿ ವೈಜಯಂತಿಗೆ ಬಂಪರ್ ಸಿನಿಮಾ ಅವಕಾಶಗಳು ಒಲಿದು ಬಂತು.
ವೈಜಯಂತಿ ಮಾಲಾ ಅವರಿಗೆ 1968ರಲ್ಲಿ ಪದ್ಮಶ್ರೀ ಮತ್ತು 2024ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.