ಬೆಂಗಳೂರು: ಕಿಡಿಗೇಡಿಗಳು ಕಾಂಗ್ರೆಸ್ ಕಾರ್ಯಕರ್ತನ ಆಟೋಗೆ ಆಸಿಡ್ ಎರಚಿದ ಘಟನೆ ನಗರದ ನಂದಿನಿಲೇಔಟ್ ನಲ್ಲಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಧನಂಜಯ್ ಎಂಬುವರ ಆಟೋಗೆ ಆಸಿಡ್ ದಾಳಿ ಮಾಡಲಾಗಿದ್ದು, ರಾತ್ರೋ ರಾತ್ರಿ ಬಂದು ಆಸಿಡ್ ಎರಚಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.
Advertisement
ದುಷ್ಕರ್ಮಿಗಳು ಆಸಿಡ್ ಎರಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, 3 ದಿನದ ಹಿಂದೆ ಆಸಿಡ್ ಎರಚಿ ಹೋಗಿದ್ದು, ಫಾರೆನ್ಸಿಕ್ ಪರೀಕ್ಷೆಯಲ್ಲಿ ಆಸಿಡ್ ಎಂಬುದು ಧೃಡವಾಗಿದೆ. ಸ್ಥಳೀಯ ರಾಜಕೀಯ ನಾಯಕನ ಪ್ರಭಾವದಿಂದ ಆಸಿಡ್ ಎರಚಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ.