ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ನ ಮಾಜಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯನ್ನು ಕಿಡಿಗೇಡಿಗಳು ಸೃಷ್ಟಿಸಿದ್ದಾರೆ. ಖದೀಮರು ಕಿಮ್ಸ್‌ನ ಮಾಜಿ ನಿರ್ದೇಶಕ, ಪ್ರಸೂತಿ ಮತ್ತು ಸೀರೋಗ ಶಾಸ ವಿಭಾಗದ ಪ್ರಾಧ್ಯಾಪಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಐಡಿ ಖಾತೆ ಸೃಷ್ಟಿಸಿ,
Advertisement
ವಾಟ್ಸ್‌ಅಪ್‌ನಲ್ಲಿ 7578851012 ಸಂಖ್ಯೆ ಮೂಲಕ ಸ್ನೇಹಿತರ ಕೋರಿಕೆ ಹಾಗೂ ಹಣಕಾಸಿನ ವಿನಂತಿ ಮಾಡುತ್ತಿದ್ದಾರೆ. ದಯಮಾಡಿ ಯಾರು ಇದನ್ನು ಸ್ವೀಕರಿಸಬಾರದು ಮತ್ತು ಇದಕ್ಕೆ ಪ್ರತಿಕ್ರಿಯಿಸಬಾರದು ಎಂದು ಡಾ. ರಾಮಲಿಂಗಪ್ಪ ಅಂಟರತಾನಿ ಅವರು ತಮ್ಮ ವಾಟ್ಸ್‌ಅಪ್ ಸ್ಟೇಟಸ್‌ನಲ್ಲಿ ಮನವಿ ಮಾಡಿದ್ದಾರೆ.