ನಾಪತ್ತೆಯಾಗಿದ್ದ ಟೆಕ್ಕಿ ನೊಯ್ಡಾದ ಮಾಲ್ʼನಲ್ಲಿ ಪತ್ತೆ..! ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ ಟೆಕ್ಕಿ

0
Spread the love

ಬೆಂಗಳೂರು: ಕೊಡಿಗೆಹಳ್ಳಿ ಟೆಕ್ಕಿ ವಿಪಿನ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಣೆಯಾಗಿದ್ದ ಟೆಕ್ಕಿಯನ್ನು ನೊಯ್ಡಾ ದ ಮಾಲ್ ಒಂದರಲ್ಲಿ ಪತ್ತೆ ಮಾಡಿದ್ದಾರೆ. ಒಂದು ವಾರದಿಂದ ಕಾಣೆಯಾಗಿದ್ದ ಟೆಕ್ಕಿ ವಿಪಿನ್ ಬೆನ್ನು ಬಿದ್ದ ಬೆಂಗಳೂರು ಪೊಲೀಸರು, ಆತನನ್ನು ನೋಯ್ಡಾದಲ್ಲಿ ಪತ್ತೆ ಹಚ್ಚಿದ್ದಾರೆ. ನೊಯ್ಡಾದಿಂದ ಬೆಂಗಳೂರಿಗೆ ಕೊಡಿಗೆಹಳ್ಳಿ ಪೊಲೀಸರು ಕರೆತಂದಿದ್ದಾರೆ. ವಿಚಾರಣೆ ವೇಳೆ, ತಾನೇ ಸ್ವಇಚ್ಛೆಯಿಂದ ಮನೆ ಬಿಟ್ಟು ಹೋಗಿರುವುದಾಗಿ ಹೇಳಿಕೆ ನೀಡಿದ್ದಾನೆ.

Advertisement

ಪತಿ ಹಾಗೂ ಪತ್ನಿ ನಡುವೆ ವಯಸ್ಸಿನ ಅಂತರವಿತ್ತು. ಟೆಕ್ಕಿ ವಿಪಿನ್‌ ತನಗಿಂತ ಎಂಟು ವರ್ಷ ದೊಡ್ಡವಳನ್ನು ಮದುವೆಯಾಗಿದ್ದ. ಪತ್ನಿಗೆ 42 ವರ್ಷ, ವಿಪಿನ್‌ಗೆ 34 ವರ್ಷ. ವಿಪಿನ್‌ನೊಂದಿಗೆ ಎರಡನೇ ಮದುವೆಯಾಗಿದ್ದ ಪತ್ನಿ, ವಿಪಿನ್‌ಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಳೆನ್ನಲಾಗಿದೆ. ವಿಪಿನ್‌ನನ್ನು ತುಂಬಾ ಕಂಟ್ರೋಲ್ ಮಾಡುತ್ತಿದ್ದ ಈಕೆ, ಮನೆಯಲ್ಲೆಲ್ಲ ಸಿಸಿಟಿವಿ ಹಾಕಿಸಿ ಗಂಡನ ಮೇಲೆ ನಿಗಾ ಇಟ್ಟಿದ್ದಳು.

ಇದರಿಂದಾಗಿ ಸಾಕಷ್ಟು ನೊಂದಿದ್ದ ವಿಪಿನ್, ಆಕೆಯ ಸಹವಾಸವೇ ಬೇಡ ಎಂದು ಮನೆ ಬಿಟ್ಟು ಹೋಗಿದ್ದ. ಪತಿ ಕಾಣೆಯಾದ ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಗೋಳು ತೋಡಿಕೊಂಡಿದ್ದ ಮಹಿಳೆ, ಪ್ರಧಾನ ಮಂತ್ರಿಗೂ ಎಕ್ಸ್‌ನಲ್ಲಿ ಈ ಪೋಸ್ಟನ್ನು ಟ್ಯಾಗ್ ಮಾಡಿದ್ದಳು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಇದೀಗ, ನಾನು ಮನೆಗೆ ಹೋಗುವುದಿಲ್ಲ ಎಂದು ಟೆಕ್ಕಿ ಪಟ್ಟು ಹಿಡಿದಿದ್ದಾನೆ.


Spread the love

LEAVE A REPLY

Please enter your comment!
Please enter your name here