ಕೋಲಾರ: ನಾಪತ್ತೆ ಆಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕೋಲಾರ ತಾಲೂಕಿನ ವಕ್ಕಲೇರಿ ಬಳಿಯ ಬಿಳಿ ಬೆಟ್ಟದ್ದಲ್ಲಿ ಪತ್ತೆಯಾಗಿದೆ. ಸೋಮಶೇಖರ್ (26) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡ ಯುವಕನಾಗಿದ್ದು,
Advertisement
ಗುರುತು ಸಿಗದಷ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜು.18 ರಂದು ಕೋಲಾರದ ವೇಮಗಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಲಾಗಿತ್ತು.
ಕೋಲಾರ ಜಿ. ಮಾಲೂರು ತಾಲೂಕಿನ ಕೊರಚನೂರು ಗ್ರಾಮದ ಯುವಕನಾಗಿದ್ದ ಸೋಮಶೇಖರ್ ಲಾರಿ ಚಾಲಕನಾಗಿ ಕೆಲಸ ಮಾಡ್ತಿದ್ದನು. ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಾಗಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.