ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣದ ಜನತೆಯ, ವಿವಿಧ ಸಂಘಟನೆಗಳ ಬಹುದಿನಗಳ ಒತ್ತಾಯದ ಪ್ರಯತ್ನವಾಗಿ ಶುಕ್ರವಾರ ಶಿರಹಟ್ಟಿ ಸಾರಿಗೆ ಘಟಕಕ್ಕೆ ಮಂಜೂರಾದ 4 ಹೊಸ ಬಸ್‌ಗಳ ಸಂಚಾರಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್‌ಗಳು ಸಹಕಾರಿಯಾಗಲಿದ್ದು, ಶಿರಹಟ್ಟಿಯಿಂದ ರಾಣೆಬೆನ್ನೂರ, ಬೆಳ್ಳಟ್ಟಿ ಮಾರ್ಗವಾಗಿ ಶ್ರೀ ಕ್ಷೇತ್ರ ಸಿಂಗಟಾಲೂರ ಸೇರಿದಂತೆ ರಾತ್ರಿ ಸಮಯದಲ್ಲಿ ಗದಗ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ಸೂಚಿಸಿದರು.
¸ಶಿರಹಟ್ಟಿ ಪಟ್ಟಣದ ಸ್ಮಶಾನದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಡಿಪೋದವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಹಾಗೂ ಬೀದಿ ದೀಪ ಅಳವಡಿಸುವ ಕುರಿತು ಸ್ಥಳೀಯ ಕುಂದುಕೊರತೆ ನಿವಾರಣಾ ಸಮಿತಿ ವತಿಯಿಂದ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿ ಅಧ್ಯಕ್ಷ ಅಕ್ಬರಸಾಬ ಯಾದಗಿರಿ, ಪ.ಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಅಶೋಕ ವರವಿ, ಶ್ರೀನಿವಾಸ ಬಾರಬರ, ರಾಮಣ್ಣ ಕಂಬಳಿ, ಪರಶುರಾಮ ಡೊಂಕಬಳ್ಳಿ, ಬಸವರಾಜ ವಡವಿ, ಮುನ್ನಾ ಢಾಲಾಯತ, ರಫೀಕ ಕೆರಿಮನಿ, ಶ್ರೀನಿವಾಸ ಕಪಟಕರ, ಜಾಕೀರ ಕೋಳಿವಾಡ, ಇಂತಿಯಾಜ ಶಿಗ್ಲಿ, ಸಂಜೀವರೆಡ್ಡಿ ಹಸರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.