ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶನಿವಾರ ಶಿರಹಟ್ಟಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ೨೫ ಲಕ್ಷ ರೂ ವೆಚ್ಚದಲ್ಲಿ ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿರಹಟ್ಟಿ ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಬಹಳ ವರ್ಷಗಳ ಹಿಂದೆಯೇ ಸ್ತಿ ಸ್ತ್ರೀಶಕ್ತಿ ಭವನ ಮಂಜೂರಾಗಿತ್ತು. ಅದಕ್ಕೆ ಸೂಕ್ತವಾದ ನಿವೇಶನದ ಕೊರತೆಯಿತ್ತು. ಈ ಬಗ್ಗೆ ಶಾಸಕ ಡಾ. ಚಂದ್ರು ಲಮಾಣಿ ಅವರ ಗಮನಕ್ಕೆ ತರಲಾಗಿತ್ತು. ಅವರ ಇಚ್ಛಾಶಕ್ತಿಯಿಂದ ಇಂದು ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಲ್ಲಿ ಮಹಿಳೆಯರಿಗೆ ಸಭೆ-ಸಮಾರಂಭ ನಡೆಸಲು ಮುಕ್ತ ಅವಕಾಶ ದೊರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷೆ ನೀಲಮ್ಮ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಸದಸ್ಯರಾದ ಪರಮೇಶ ಪರಬ, ಸಂದೀಪ ಕಪ್ಪತ್ತನವರ, ಮಹಾದೇವ ಗಾಣಗೇರ, ಅಶೋಕ ವರವಿ, ಜಾನು ಲಮಾಣಿ, ಗೂಳಪ್ಪ ಕರಿಗಾರ, ರಾಮಣ್ಣ ಕಂಬಳಿ, ಬಿಜೆಪಿ ಮಹಿಳಾ ತಾಲೂಕಾಧ್ಯಕ್ಷೆ ನಂದಾ ಪಲ್ಲೇದ, ಪರಶುರಾಮ ಡೊಂಕಬಳ್ಳಿ, ಅಕ್ಬರಸಾಬ ಯಾದಗಿರಿ, ಸಿ.ಪಿ. ಕಾಳಗಿ, ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ಬಿಸಿಎಂನ ಮರಿಗೌಡ ಸುರಕೋಡ ಮುಂತಾದವರು ಉಪಸ್ಥಿತರಿದ್ದರು.