ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ಯಾರಂಟಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದ್ದು, ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮತ್ತಷ್ಟು ಬಲಯುತವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಡಂಬಳ ಹೋಬಳಿಯ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕಪ್ಪತ್ತಗಿರಿ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮನ ದೇವಸ್ಥಾನಕ್ಕೆ ಕೊಳವೆ ಮಾರ್ಗ ಅಳವಡಿಕೆ ವಿದ್ಯುದೀಕರಣ ಮಾಡುವುದು, ಶ್ರೀ ಬೀರಲಿಂಗೇಶ್ವರ ಗುಡಿಯ ಸುತ್ತಲೂ ಸಿ.ಸಿ ರಸ್ತೆ ನಿರ್ಮಾಣ, ಕೆರೆಯ ಸುತ್ತ ಜಾಲರಿ ಅಳವಡಿಕೆ, ಶಾಲಾ ಕೊಠಡಿ ಮೇಲ್ಛಾವಣಿ ನಿರ್ಮಾಣ, ಸ್ಮಾರ್ಟ್ ಕ್ಲಾಸ್ ಮುಂತಾದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ, ಗ್ರಂಥಾಲಯ, ಶಾಲಾ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಸರ್ಫಿಂಗ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದ ಯುವಕನಿಗೆ 1 ಲಕ್ಷ ರೂ ಪ್ರೋತ್ಸಾಹ ಧನವನ್ನು ಶಾಸಕ ಜಿ.ಎಸ್. ಪಾಟೀಲ ವಿತರಿಸಿದರು. ಮುರಡಿ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಸ್ವಿಕರಿಸಿದರಲ್ಲದೆ, ಚಿಕ್ಕವಡ್ಡಟ್ಟಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಸೂಕ್ತ ವೈದ್ಯರನ್ನು ನೇಮಿಸುವಂತೆ ದೂರವಾಣಿ ಮೂಲಕ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಮುಂಡರಗಿ ತಾಲ್ಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ತಹಸೀಲ್ದಾರ್ ಯರಿಸ್ವಾಮಿ, ಇಒ ವಿಶ್ವನಾಥ ಹೊಸಮನಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉದಯಕುಮಾರ ಯಲಿವಾಳ, ಗ್ರಾ.ಪಂ ಅಧ್ಯಕ್ಷೆ ಶೋಭಾ ಕೊಡ್ಲಿ, ಹಾರೂಗೇರಿ ಗ್ರಾ.ಪಂ ಅಧ್ಯಕ್ಷೆ ಶಾಂತವ್ವ ಭರಮಕ್ಕನವರ, ಉಪಾಧ್ಯಕ್ಷೆ ರೇಖಾ ಭಜಂತ್ರಿ, ವಿ.ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ಗೋಣಿಬಸಪ್ಪ ಕೊರ್ಲಹಳ್ಳಿ, ಮಹೇಶ್ ಗಡಗಿ, ಬಸವರಡ್ಡಿ ಬಂಡಿಹಾಳ, ಪುಲಕೇಶಗೌಡ ಪಾಟೀಲ, ಬಸವರಾಜ ಶಿರೋಳ, ಬಾಬು ಮೂಲಿಮನಿ, ರಾಜು ಡಾವಣಗೇರಿ, ಗುತ್ತಿಗೆದಾರರಾದ ನಾಗರಾಜ ಸಜ್ಜನ, ಲಕ್ಷ್ಮಣ ಬಾದಾಮಿ, ಹಾಲೇಶ ಹಳ್ಳಿ, ಪ್ರಧಾನೀ ಕರಿ, ದೇವಪ್ಪ ಗೌರಿ, ಬಸಪ್ಪ ಮಾಯನ್ನವರ, ಮಲ್ಲಪ್ಪ ಬಳ್ಳಾರಿ, ಸುರೇಶ್ ಮೇಗಲಮನಿ, ವಸಂತ ಮೇಗಲಮನಿ, ಮನೋಜ ರಾಠೋಡ, ಶೇಖರ ಪವಾರ, ಉಮೇಶ ಲಮಾಣಿ, ಭುವನೇಶ್ವರಿ ಕಲ್ಲಕುಟಿಗರ, ವಿಶ್ವನಾಥ ಪಾಟೀಲ, ಬಿಒ ಗಂಗಾಧರ ಅಣ್ಣಿಗೇರಿ, ಸಿಡಿಪಿಒ ಮಹಾದೇವ, ಪಿಡಿಒ ಮಹೇಶ್ ಅಲಿಪುರ, ಗ್ರಾ.ಪಂ ಸದಸ್ಯರು, ರೈತರು, ಗ್ರಾಮದ ಹಿರಿಯರು ಇದ್ದರು.
ಪ್ರತಿ ಗ್ರಾಮದಲ್ಲಿ ಗ್ರಂಥಾಲಯ, ಶಾಲೆಗಳ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ. ಓದುವಿಕೆಗೆ ಕೊನೆಯಿಲ್ಲ, ಓದು ನಿಮಗೆ ಉತ್ತಮ ಸ್ಥಾನವನ್ನು ಕಲ್ಪಿಸುತ್ತದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಕಾಂಗ್ರೆಸ್ ಪಕ್ಷ ಕಡು ಬಡವರ, ರೈತರ, ಕಾರ್ಮಿಕರ, ಯುವಕರ ಹಿತ ಕಾಯುತ್ತಿದೆ. ವಿವಿಧ ಕೆರೆಗಳನ್ನು ಭರ್ತಿಗೊಳಿಸುವ ಜಾಲವಾಡಗಿ ಏತ ನೀರಾವರಿ ಕೆಲಸ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.



