ಶಾಸಕರಾಗಿ ಹಿಟ್ಲರ್ ರೀತಿ ಆಡಬಾರದು: ಸುದೀಪ್‌ ಆಪ್ತ ಚಂದ್ರಚೂಡ್ ಚಕ್ರವರ್ತಿ

0
Spread the love

ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚೀತ್ರೋತ್ಸವ ನಡೆಯುತ್ತಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು ಡಿಕೆ ಶಿವಕುಮಾರ್‌ ಹೇಳಿದ ಮಾತು ಸಾಕಷ್ಟು ಟೀಕೆಗೆ ಕಾರಣವಾಗಿದೆ. ಇದರ ಜೊತೆಗೆ ಸಿಸಿಎಲ್ ಆಡೋದಕ್ಕೆ ಸಮಯವಿದೆ, ಫಿಲ್ಮ್ ಫೆಸ್ಟಿವಲ್ ಭಾಗವಹಿಸೋದಕ್ಕೆ ಸಮಯವಿಲ್ವಾ ಎಂದು ಸುದೀಪ್ ವಿರುದ್ಧ ಕಿಡಿಕಾರಿದ್ದ ಶಾಸಕ ರವಿ ಗಣಿಗ ಮಾತಿಗೆ ನಟನ ಮ್ಯಾನೇಜರ್ ಚಂದ್ರಚೂಡ್ ಚಕ್ರವರ್ತಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಚಲನಚಿತ್ರೋತ್ಸವಕ್ಕೆ ಆಹ್ವಾನ ಕೊಡದೇ ಸುದೀಪ್ ಅವರು ಬರೋಕೆ ಹೇಗೆ ಸಾಧ್ಯ ಎಂದು ಚಂದ್ರಚೂಡ್‌ ಪ್ರಶ್ನೆ ಮಾಡಿದ್ದಾರೆ. ಸಾಧು ಕೋಕಿಲ ಅವರು ಮಾಡಿರುವ ಚಿತ್ರೋತ್ಸವದ ಅಪಭೃಂಶ ಇದು. ಇನ್ನೂ ಶಾಸಕ ರವಿ ಗಣಿಗ ಅವರಿಗೆ ಸುದೀಪ್ ಹೆಸರನ್ನ ಸರಿಯಾಗಿ ಹೇಳುವ ಧೈರ್ಯವೂ ಇಲ್ಲ. ಸುಮ್ಮನೆ ಆರೋಪ ಮಾಡೋದಲ್ಲ ಎಂದು ಚಂದ್ರಚೂಡ್ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ.

2004ರಿಂದ ಇವತ್ತಿನವರೆಗೂ ಯಾವುದೇ ಕಾರ್ಯಕ್ರಮಕ್ಕೆ ಭಾಗಿಯಾಗಿ ಅವಾರ್ಡ್ಗಳನ್ನು ತೆಗೆದುಕೊಂಡಿಲ್ಲ ಅಂದ್ರೆ, 2019ರ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ರು. ಆದರೆ ಅದನ್ನು ತಿರಸ್ಕರಿಸಿಲ್ಲ. ಈ ಹಿಂದೆ ಡಾಕ್ಟರೇಟ್ ಬಂದಾಗ ಸಮಾಜಮುಖಿ ಕೆಲಸ ಮಾಡಿದವರಿಗೆ ಕೊಡಿ ಅಂದ್ರೋ ಈಗಲೂ ಹಾಗೆ. ಈ ಯೋಚನೆ ಹಿಂದೆ ಕಾರಣವಿತ್ತು ಒಂದಿಷ್ಟು ಅವಮಾನವಿತ್ತು ಎಂದಿದ್ದಾರೆ. ಈ ಹೀರೋಗಳನ್ನು ಬ್ಯಾನ್ ಮಾಡಬೇಕು ಎಂದು ಅವರು ಹೇಳಿದ್ದಾರೆ. ಶಾಸಕರಾಗಿ ಈ ಹೇಳಿಕೆ ನೀಡಬಾರದು. ಹಿಟ್ಲರ್ ರೀತಿ ಆಡಬಾರದು’ ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್. ಅಲ್ಲದೆ, ರವಿಕುಮಾರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here