ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಮಾಡಳ್ಳಿ ಗ್ರಾಮದ ಶ್ರೀ ಎನ್.ಜಿ. ಪಾಟೀಲ ಸರಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ಒಟ್ಟು ಫಲಿತಾಂಶ ಶೇ.90.62 ಆಗಿದ್ದು, 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 15 ಪ್ರಥಮ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ವರ್ಗದಲ್ಲಿ ಪಾಸಾಗಿದ್ದಾರೆ.
Advertisement
ಶಾಲೆಯ ಸೃಷ್ಟಿ ಪಾಟೀಲ ಶೇ.97.92, ಆಯೇಶಾಬಾನು ನದಾಫ್ ಶೇ.93.76, ನಿವೇದಿತಾ ಕೊಟಗಿ ಶೇ.92.32, ಅರ್ಚನಾ ಮಣ್ಣನವರ ಶೇ.91.52 ಹಾಗೂ ಸಮೀನಾ ಪರೀಟ್ 90.88 ಅಂಕ ಗಳಿಸಿದ್ದಾರೆ.