ಬೆಂಗಳೂರು:- ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮೋದಿ ಟೀಕಿಸಿದ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮೋದಿಯವರು ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದಿದ್ದರು. ಆದಾಯ ದ್ವಿಗುಣ ಆಗಿದೆಯಾ? ಚುನಾವಣೆ ವೇಳೆ ಮೋದಿಯವರು ಏನೆಲ್ಲ ಭರವಸೆ ಕೊಟ್ಟಿದ್ದಾರೆ, ಅದೆಲ್ಲ ಅನುಷ್ಠಾನ ಮಾಡಿದ್ದಾರಾ? ಪ್ರಧಾನಿಗಳ ಮಾತು ಅತ್ಯಂತ ಜವಾಬ್ದಾರಿಯಿಂದ ಇರಬೇಕು ಎಂದರು.
ಮೋದಿಯವರು ಈ ದೇಶದ ಪ್ರಧಾನಿ. ಜನ ಪ್ರಧಾನಿಯವರ ಮಾತನ್ನು ಗಮನಿಸುತ್ತಿರುತ್ತಾರೆ. ಪ್ರಧಾನಿ ಆಡುವ ಮಾತು ಅತ್ಯಂತ ಜವಾಬ್ದಾರಿಯಿಂದ ಇರಬೇಕು. ಮೋದಿಯವರು ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದಿದ್ದರು. ಆದಾಯ ದ್ವಿಗುಣ ಆಗಿದೆಯಾ? ಚುನಾವಣೆ ವೇಳೆ ಮೋದಿಯವರು ಏನೆಲ್ಲ ಭರವಸೆ ಕೊಟ್ಟಿದ್ದಾರೆ, ಅದೆಲ್ಲ ಅನುಷ್ಠಾನ ಮಾಡಿದ್ದಾರಾ? ಕಳೆದ ಸಲ ಮಹಾರಾಷ್ಟ್ರದಲ್ಲಿ ಏನೆಲ್ಲ ಭರವಸೆ ಕೊಟ್ಟಿದ್ದರೂ, ಅನುಷ್ಠಾನ ಮಾಡಿದ್ದಾರಾ? ಟೀಕೆ, ಅಭಿಪ್ರಾಯ ತಿಳಿಸುವುದು ಅವರ ಹಕ್ಕು, ನಾವು ಪ್ರಶ್ನೆ ಮಾಡಲ್ಲ. ಆದರೆ ಬಿಜೆಪಿಯಲ್ಲಿ ಬೇರೆಯವರು ಟೀಕೆ ಮಾಡಿದರೆ ಅದು ಬೇರೆ. ಪ್ರಧಾನಿಯವರು ಈ ರೀತಿ ಟೀಕೆ ಮಾಡುವುದು ಔಚಿತ್ಯವಲ್ಲ ಎಂದು ಟಕ್ಕರ್ ನೀಡಿದ್ದಾರೆ.