ವಿಜಯಸಾಕ್ಷಿ ಸುದ್ದಿ, ಗದಗ : ನಗರದ ವೀರಶೈವ ಜನರಲ್ ಲೈಬ್ರರಿ ಕಾರ್ಯಾಲಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಗದಗ ತಾಲೂಕು ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಮೋಹನ ಅನವೀರಪ್ಪ ದೊಡಕುಂಡಿ ನಾಮಪತ್ರ ಸಲ್ಲಿಸಿದರು.
ಇವರ ನಾಮಪತ್ರಕ್ಕೆ ಸೂಚಕರಾಗಿ ಗುರುಲಿಂಗಪ್ಪ ಕಾಡಪ್ಪನವರ, ಅನುಮೋದಕರಾಗಿ ಸಿದ್ದಲಿಂಗಪ್ಪ ಪಿಳ್ಳಿ, ವಿರೇಶ ನಾರಾಯಣಪುರ, ಅಶೋಕ ಇಟಗಿ, ಟಿ.ಎಂ. ವಾಲಿ, ಮಲ್ಲಿಕಾರ್ಜುನ ಹಿರೇಮಠ, ನೇತ್ರಾವತಿ ನಾರಾಯಣಪೂರ, ಪ್ರಭುಲಿಂಗ ಶಿವಶಿಂಪಗೇರ, ನಾಗರಾಜ ನಾರಾಯಣಪುರ, ಶಿವಯೋಗಿ ತಡಸದ, ಸುರೇಶ ನಾರಾಯಣಪುರ ಇವರಿಗೆ ಅನುಮೋದಕರಾಗಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಪ್ರಭಾತಕುಮಾರ್ ನಾರಾಯಣಪುರ, ಬಿ.ಡಿ. ಕಿಲಬನವರ, ಸಿದ್ದಲಿಂಗಪ್ಪ ಬಂಡೆಪ್ಪನವರ, ಪ್ರಭು ಜಂಗಮನಿ, ಯುವ ಮುಖಂಡರಾದ ವಿಜಯಕುಮಾರ್ ಬಡಿಗೇರ, ಬಾಪುಗೌಡ, ಲಕ್ಷö್ಮಣ, ಪ್ರವೀಣ್ ಜಂತ್ಲಿ, ಸಂತೋಷ್ ದೊಡಕುಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



