ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಶ್ರೀ ಕಲ್ಮೇಶ್ವರ ದೇವರ ಹುಚ್ಚಯ್ಯ ತೇರು ಆ. 11ರ ಶ್ರಾವಣ ಮಾಸದ 3ನೇ ಸೋಮುವಾರದಂದು ನಡೆಯಲಿದೆ.
Advertisement
ಜಾತ್ರೆಯ ಅಂಗವಾಗಿ ಬೆಳಿಗ್ಗೆ 6ಗಂಟೆಗೆ ಮಹಾರುದ್ರಾಭಿಷಕ, ಮಧ್ಯಾಹ್ನ 2ಕ್ಕೆ ಅನ್ನಸಂತರ್ಪಣೆ ಹಾಗೂ ಸಂಜೆ 6ಕ್ಕೆ ಹುಚ್ಚಯ್ಯ ಉತ್ಸವದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಡೊಳ್ಳು ವಾದ್ಯ ವೈಭವದೊಂದಿಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮೂಲಕ ಮುಂದೆ ಸಾಗಿ ಊರ ಅಗಸಿಯ ಭೋರ್ಗಲ್ಲವರೆಗೆ ಎಳೆದು ಮರಳಿ ದೇವಸ್ಥಾನ ತಲುಪಲಾಗುವದು ಎಂದು ದೇವಸ್ಥಾನ ಸಮಿತಿ ಪ್ರಕಟಣೆ.