ಚಿಕ್ಕಬಳ್ಳಾಪುರ: ಬಡ್ಡಿ ಹಣ ಕೊಡದಿದ್ದಕ್ಕೆ ಮನೆಗೆ ಬೀಗ ಹಾಕಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದ ವರಲಕ್ಷ್ಮಿ ಸುನಿಲ್ ಬಡ ದಂಪತಿಗಳು, ನವೀನ್ ,ಪ್ರದೀಪ್ ಪದ್ಮಮ್ಮ ಎಂಬುವರಿಂದ ನಲವತ್ತು ಸಾವಿರ ಸಾಲ ಪಡೆದಿದ್ದರು.
Advertisement
ಪೋನ್ ಪೇ ಮೂಲಕ ಎಪ್ಪತ್ತು ಸಾವಿರ ಬಡ್ಡಿ ಸಹ ಕಟ್ಟಿದ್ದರು. ಆದ್ರೆ ಬಡ್ಡಿಕೋರರು ಒಂದೂವರೆ ಲಕ್ಷಕ್ಕೆ ಬೇಡಿಕೆ ಇಟ್ಟು ದಂಪತಿಗಳಿಗೆ ಕಿರುಕುಳ ನೀಡಿದ್ದಾರೆ
ಮನೆ ಹೊಡೆದು ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸತ್ತ ದಂಪತಿಗಳು, ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ನವೀನ್ ,ಪ್ರದೀಪ್ ಪದ್ಮಮ್ಮ ಎಂಬುವವರ ವಿರುದ್ಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.