ನವದೆಹಲಿ:- ಒಂದು ತಿಂಗಳ ಕಾಲ ನಡೆಯುಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಇಂದು ಚಾಲನೆ ಸಿಗಲಿದೆ. ಈ ಅಧಿವೇಶನವು ಆಗಸ್ಟ್ 12ಕ್ಕೆ ಪೂರ್ಣಗೊಳ್ಳಲಿದೆ.
ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜು!
ಒಂದೆಡೆ ಪಹಲ್ಗಾಂ ದಾಳಿ, ಬಳಿಕದ ಅಪರೇಷನ್ ಸಿಂದೂರ, ಭಾರತ- ಪಾಕ್ ಯುದ್ಧ ಸ್ಥಗಿತ ಕುರಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ, ಇತ್ತೀಚಿನ ಏರಿಂಡಿಯಾ ವಿಮಾನ ಪತನ, ಬಿಹಾರದಲ್ಲಿನ ವಿಶೇ಼ಷ ಮತಪಟ್ಟಿ ಪರಿಷ್ಕರಣೆ ಮೊದಲಾದ ವಿಷಯ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.
ಸದನದಲ್ಲಿ ಚರ್ಚೆಗೆ ವಿರೋಧ ಪಕ್ಷದ ಬೇಡಿಕೆಗಳು:
1.ಪಹಲ್ಗಾಮ್ ಮತ್ತು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ನೀಡಿದ ಹೇಳಿಕೆಗಳ ಕುರಿತು ಸದನದಲ್ಲಿ ಚರ್ಚೆ ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
2.ಭಾರತ-ಪಾಕಿಸ್ತಾನದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಇತ್ತೀಚಿನ ಹೇಳಿಕೆಯನ್ನು ಸದನದಲ್ಲಿ ಚರ್ಚಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.
3.ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಈ ಮಧ್ಯೆ ಪ್ರತಿಪಕ್ಷಗಳು ಸದನದಲ್ಲಿ ಮತದಾನದ ಹಕ್ಕಿನ ಬಗ್ಗೆ ಚರ್ಚೆಗೆ ಒತ್ತಾಯಿಸಿವೆ.
4.ಸಭೆಯಲ್ಲಿ, ವಿರೋಧ ಪಕ್ಷಗಳು ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ರಚಿಸಲಾದ ಎರಡು-ಮುಂಭಾಗದ ಅಕ್ಷದ ಬಗ್ಗೆಯೂ ಚರ್ಚೆಗೆ ಒತ್ತಾಯಿಸಿವೆ.
5.ಈಶಾನ್ಯ ರಾಜ್ಯ ಮಣಿಪುರದ ಪರಿಸ್ಥಿತಿಯನ್ನು ಸದನದಲ್ಲಿ ಚರ್ಚಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.



