ಕ.ವಿ.ಮಂ.ನಿವೃತ್ತ ನೌಕರರ ಮಾಸಿಕ ಸಭೆ

0
employees
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕ.ವಿ.ಮಂ. ನಿವೃತ್ತ ನೌಕರರ ಮಾಸಿಕ ಸಭೆ ವಿಭಾಗೀಯ ಕಛೇರಿಯ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಎ.ಎನ್.ಬಸ್ತಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಎಂ.ಕೆ. ಮೊರಬದ ಹಾಗೂ ಕೆ.ಜಿ. ತಿರ್ಲಾಪೂರ ತಮ್ಮ ಜನ್ಮದಿನದ ಪ್ರಯುಕ್ತ ದಾಸೋಹ ಸೇವೆಯನ್ನು ವಹಿಸಿಕೊಂಡಿದ್ದರು.

Advertisement

ಕಾರ್ಯಾಧ್ಯಕ್ಷ ಜಿ.ಎಂ. ಯಾನಮಶೆಟ್ಟಿ ಸಂಘ ನಡೆದು ಬಂದ ದಾರಿ ಹಾಗೂ ಅದರ ಚಟುವಟಿಕೆಗಳ ಬಗ್ಗೆ ವಿವರಿಸಿದರು. ವಾಯ್.ಬಿ. ಭಾನಾಪೂರ ಶರಾವತಿ ಪತ್ತಿನ ಸಹಕಾರಿ ಸಂಘ ಹಾಗೂ ಸಮುದಾಯ ಭವನದ ಬಗ್ಗೆ ವಿವರಿಸಿದರು. ಎಸ್.ಬಿ. ಓಲಿ ಅವರು ಕೇಂದ್ರ ಸಮಿತಿಯ ಸಭೆಯಲ್ಲಿ ನಡೆದ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು.

ಎನ್.ವ್ಹಿ. ಹೇಮಗಿರಿಮಠ, ಬಿ.ಎನ್. ಘಾಳಿ, ಕೆ.ಎಸ್. ಲಕ್ಕುಂಡಿ, ಬಿ.ಎಂ. ಬಾಣಿ, ಫಕ್ಕೀರಪ್ಪ ತುಪ್ಪದ, ಎಸ್.ಎಫ್. ಸೈದಾಪೂರ, ಬಿ.ಎಂ. ಕಂಬಿ, ಕೆ.ಜಿ. ಜಲರಡ್ಡಿ, ಎಸ್.ಎಸ್. ಸ್ಥಾವರಮಠ, ಎನ್.ಎಮ್. ಕೊಣ್ಣೂರ, ಆಯ್.ಎಸ್. ಸರೂರ, ಜಿ.ಆರ್. ಅಗಸಿಯವರ, ಎಸ್.ಆರ್. ಕಲಾಲ, ಎಚ್.ಬಿ. ಬಡಿಗೇರ, ಎಸ್.ಎಸ್. ಹಿರೇಮಠ, ವ್ಹಿ.ಎಲ್.ಅಯ್ಯನಗೌಡರ, ಬಿ.ಎಸ್. ಪೂಜಾರ, ನಾಗನಗೌಡ, ಚಿಕ್ಕಣ್ಣವರ, ಆರ್.ಎಂ. ಹಿತ್ತಲಮನಿ, ಸಿ.ವ್ಹಿ. ಬೋಳಣ್ಣವರ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಎನ್.ಎಂ. ಬಾಗಲಿ ಪ್ರಾರ್ಥಿಸಿದರು. ಬಿ.ವ್ಹಿ. ಕಾಮಣ್ಣವರ ಸ್ವಾಗತಿಸಿದರು. ವ್ಹಿ.ಪಿ.ಸವಡಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here