HomeGadag Newsಕ.ವಿ.ಮಂ ನಿವೃತ್ತ ನೌಕರರ ಮಾಸಿಕ ಸಭೆ

ಕ.ವಿ.ಮಂ ನಿವೃತ್ತ ನೌಕರರ ಮಾಸಿಕ ಸಭೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕ.ವಿ.ಮಂ ನಿವೃತ್ತ ನೌಕರರ ನೂತನ ಸಮುದಾಯ ಭವನದಲ್ಲಿ ಜಿ.ಎಂ. ಯಾನಮಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ಮುಖ್ಯ ಅತಿಥಿಗಳಾಗಿ ಕಬ್ಬಿಗರ ಕೂಟದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಿ.ವ್ಹಿ. ಬಡಿಗೇರ ಪಾಲ್ಗೊಂಡಿದ್ದರು. ಎ.ಎನ್. ಬಸ್ತಿ ಹಾಗೂ ಬಿ.ಎಂ. ಬಾಣಿಯವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದಾಸೋಹ ಸೇವೆಯನ್ನು ವಹಿಸಿಕೊಂಡಿದ್ದರು. ವಾಯ್.ಬಿ. ಭಾನಾಪೂರ ಅವರು ಶರಾವತಿ ಪತ್ತಿನ ಸಹಕಾರಿ ಸಂಘ ಹಾಗೂ ಸಮುದಾಯ ಭವನದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಎಸ್.ಬಿ. ಓಲಿ ಅವರು ಕೇಂದ್ರ ಸಮಿತಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಹೊಸ ಸದಸ್ಯರಿಗೆ ಸದಸ್ಯತ್ವ ಕಾರ್ಡ್ ವಿತರಿಸಲಾಯಿತು. ವ್ಹಿ.ಪಿ. ಸವಡಿ, ವ್ಹಿ.ಎಸ್. ಹೊಸಮನಿ, ಜಿ.ಆರ್. ಅಗಸಿಯವರ, ಬಿ.ಎಂ. ಕಂಬಿ, ಎಂ.ಜಿ. ಫತ್ತೇನವರ, ಜೆ.ಡಿ. ನದಾಫ್, ಆಯ್.ಎಸ್. ಸರೂರ, ಎಸ್.ಆರ್. ಕಲಾಲ, ಎಸ್.ಎಫ್. ಸೈದಾಪೂರ, ಎಂ.ಎಂ. ಗದಗ, ಎಸ್.ಎಂ. ನಾಗಸಮುದ್ರ, ಜಿ.ಬಿ. ಕೊಪ್ಪಳ, ಸುಧಾಕರ ಹಿತ್ತಲಮನಿ, ಎ.ಬಿ. ರಾಠೋಡ ಮುಂತಾದವರು ಉಪಸ್ಥಿತರಿದ್ದರು.

ವ್ಹಿ.ಎಲ್. ಅಯ್ಯನಗೌಡರ ಹಾಗೂ ಎನ್.ಎಂ. ಬಾಗಲಿ ಪ್ರಾರ್ಥಿಸಿದರು. ಎಸ್.ಆರ್. ಕುಂದರಗಿ ಸ್ವಾಗತಿಸಿದರು. ಜೆ.ಎನ್. ಹವಳೆ ವಂದಿಸಿದರು ಎಂದು ಬಿ.ಎನ್. ಘಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!