HomeGadag Newsಹಿರಿಯ ನಾಗರಿಕರ ಸಂಘದ ಮಾಸಿಕ ಸಭೆ

ಹಿರಿಯ ನಾಗರಿಕರ ಸಂಘದ ಮಾಸಿಕ ಸಭೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕು ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯು ಸಂಘದ ಸದಸ್ಯೆ ಪಾರವ್ವ ಧರಣಿ ಅವರ ನಿವಾಸದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಹಿರಿಯ ನಾಗರಿಕಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದೆ. ಹಿರಿಯರು ಅವುಗಳ ಬಗ್ಗೆ ತಿಳಿದುಕೊಂಡು ಉಪಯೋಗ ಪಡೆದುಕೊಳ್ಳಬೇಕು. ಈಗಾಗಲೇ ಸಂಘದಲ್ಲಿ 800ಕ್ಕೂ ಹೆಚ್ಚು ಸದಸ್ಯರು ಹೆಸರು ನೋಂದಾಯಿಸಿಕೊAಡಿದ್ದು, ಅವರಿಗೆ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಲಾಗಿದೆ. ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಒದಗಿಸಲು ಸಂಘ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಸಂಘದ ಕಾರ್ಯಚಟುವಟಿಕೆಗಳನ್ನು ನಡೆಸಲು ಸ್ಥಳದ ಅಗತ್ಯ ಇದೆ. ಈ ಕುರಿತು ಪುರಸಭೆಗೆ ಮನವಿ ಮಾಡಿದ್ದು, ಇನ್ನು ಸ್ವಲ್ಪ ದಿನಗಳಲ್ಲೇ ಸ್ಥಳದ ಅವಕಾಶ ಮಾಡಿಕೊಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚೆನ್ನಪ್ಪ ಕೋಲ್ಕಾರ, ಎನ್.ಎ. ಹೇಮಾದ್ರಿಮಠ, ಎಂ.ಎಚ್. ಖುದ್ದುಬಾಯಿ, ಸಿ.ಎಸ್. ಕೋಟಿಮಠ ಸೇರಿದಂತೆ ಮತ್ತಿತರರು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!