ಹಾವೇರಿ: ಸಿದ್ದರಾಮಯ್ಯರನ್ನು ಕೆಳಗೆ ಇಳಿಸಲು ದೆಹಲಿಯಲ್ಲಿ ಮೂಹರ್ತ ಫಿಕ್ಸ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ ಸಿಬಿಐ ವಹಿಸಿಬೇಕಿತ್ತು.
ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ತಿರ್ಮಾನ ಮಾಡಿದೆ. ಮುಖ್ಯಮಂತ್ರಿ ಕೆಳಗೆ ಇಳಿಸಲು ದೆಹಲಿಯಲ್ಲಿ ಮೂಹರ್ತ ಫಿಕ್ಸ್ ಆಗಿದೆ ಎಂದು ವಿಜಯೇಂದ್ರ ಭವಿಷ್ಯ ನುಡಿದರು.
ಮೈಸೂರಿನಲ್ಲಿ ಒಂದು ಮನೆ ಇಲ್ಲ ಎನ್ನುವ ಕಾರಣಕ್ಕಾಗಿ ಶ್ರೀಮತಿ ಹೆಸರಿನಲ್ಲಿ 14 ಸೈಟ್ ತೆಗೆದುಕೊಂಡಿದ್ದಾರೆ. ಲೋಕಾಯುಕ್ತರು ತರಾತುರಿಯಲ್ಲಿ ವಿಚಾರ ಮಾಡಿ ಕ್ಲೀನ್ ಚೀಟ್ ಕೊಡಲು ದಿನೇಶ ಅನ್ನೋ ಅಧಿಕಾರಿಯನ್ನ ಬಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯ ಭಂಡರಿದ್ದಾರೆ. ಅವರಿಗೆ ಆತಂಕ ಕಾಡುತ್ತಿದೆ. ಈಗ ಗೌರವ ಹರಾಜು ಆಗಿದೆ. ಹಾಗಾಗಿ ಮುಖ್ಯಮಂತ್ರಿಗಳು ವಿಚಲಿತರಾಗಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.