ಮಂಗಳೂರು:- ವಿಹರಿಸುತ್ತಿದ್ದ ಜೋಡಿಗೆ ಪಾನಮತ್ತನಾಗಿ ಬಂದ ಯುವಕರ ಗುಂಪು ಕಿರುಕುಳ ನೀಡಿರುವ ಘಟನೆ ಪುತ್ತೂರಿನ ಬಿರುಮಲೆಗುಡ್ಡದಲ್ಲಿ ಜರುಗಿದೆ.
Advertisement
ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ಮುಂದುವರಿದಿದೆ. ಜೋಡಿಯ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕಿರುಕುಳ ನೀಡಲಾಗಿದೆ. ಯುವತಿಯ ಹೆಲ್ಮೆಟ್ ಕಸಿದುಕೊಂಡು ಹಲ್ಲೆಗೆ ಯತ್ನ ಮಾಡಲಾಗಿದೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ಪುಂಡರು ನಿಂದಿಸಿದ್ದಾರೆ.
ಕಿಡಿಗೇಡಿಗಳಿಂದ ತಪ್ಪಿಸಿಕೊಂಡು ಜೋಡಿ ಬಚಾವ್ ಆಗಿದೆ.