ಬೆಂಗಳೂರು:- ಚಾಲಕನ ನಿರ್ಲಕ್ಷ್ಯದಿಂದ ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿದೆ.
Advertisement
ಮದ್ಯಪಾನ ಮಾಡಿ ಚಾಲಕ ಟಿಪ್ಪರ್ ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ. ಟಿಪ್ಪರ್ ಟಾಪ್ಗೆ ವಿದ್ಯುತ್ ಕಂಬದ ವೈರ್ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಇದನ್ನು ಗಮನಿಸದೆ ಚಾಲಕ ಲಾರಿ ಚಲಾಯಿಸಿದ್ದು 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಖಂಗೊಂಡಿವೆ.
ಸದ್ಯ ಜೆಸಿಬಿ ಮುಖಾಂತರ ವಿದ್ಯುತ್ ಕಂಬ ತೆರವು ಕಾರ್ಯ ನಡೆಸಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರು ಟಿಪ್ಪರ್ ಜಪ್ತಿ ಮಾಡಿ ಚಾಲಕ ಮಣಿ ವಶಕ್ಕೆ ಪಡೆದಿದ್ದಾರೆ.
ಮಧ್ಯರಾತ್ರಿ 1:30ರ ಸುಮಾರಿಗೆ ಚಿಕ್ಕಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಖ್ಯರಸ್ತೆಯಲ್ಲೇ ಕಂಬಗಳು ಧರೆಗುರುಳಿದ್ದು ರಸ್ತೆಯ ತುಂಬೆಲ್ಲಾ ಲಾರಿಯಲ್ಲಿದ್ದ ಜಲ್ಲಿ ಹುಡಿ ಬಿದ್ದಿದೆ.