ಚಿಕ್ಕಮಗಳೂರು:- ಕಾಫಿನಾಡು ಚಿಕ್ಕಮಗಳೂರಿನಲ್ಲಿ ಆನೆಗಳ ಹಾವಳಿ ಜೋರಾಗಿದೆ. ಅದರಂತೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹಿನ್ನೀರಿನ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಗ್ರಾಮಗಳತ್ತ ಮುಖ ಮಾಡಿದ್ದು, ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಆನೆಗಳು ಭದ್ರಾ ಅಭಯಾರಣ್ಯಕ್ಕೆ ಹೋಗಿ ಮತ್ತೆ ವಾಪಸ್ಸಾಗುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋಣ್ ಬಳಸಿಕೊಂಡು ಆನೆಗಳ ಚಲನಾವಲನದ ಮೇಲೆ ನಿಗಾ ಇಟ್ಟಿದ್ದಾರೆ. ಈ ಮೂಲಕ ಕಾಡಾನೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಆನೆಗಳು ಗ್ರಾಮದೆಡೆಗೆ ಬರುತ್ತಿರುವುದರಿಂದ ಭದ್ರಾ ಹಿನ್ನೀರಿನ ಸುತ್ತಮುತ್ತ ಇರುವ ಹಾಗಲಮನೆ, ರಾವೂರು ಸೇರಿ ಹಲವು ಗ್ರಾಮಗಳ ಜನರಲ್ಲಿ ಅತಂಕ ಮನೆಮಾಡಿದೆ.
ಇನ್ನೂ ಜಿಲ್ಲೆಯಲ್ಲಿ ದಿನೇ ದಿನೇ ಕಾಡಾನೆ ಹಾಗೂ ಮಾನವನ ಸಂಘರ್ಷ ಹೆಚ್ಚಾಗುತ್ತಿದೆ.



