ಗದಗ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್.ಅಬ್ಬಿಗೇರಿಯವರ ನೇತೃತ್ವದಲ್ಲಿ ಗದಗ-ಬೆಟಗೇರಿಯ 50ಕ್ಕೂ ಹೆಚ್ಚು ಕಾರ್ಯಕರ್ತರು ವೇದಿಕೆಯ ತತ್ವ ಸಿದ್ಧಾಂತವನ್ನು ಮೆಚ್ಚಿ ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ತೌಸೀಫ್ ಡಾಲಾಯತ್, ಜಿಲ್ಲಾ ಉಪಾಧ್ಯಕ್ಷ ಮುತ್ತಣ್ಣ ಚವಡಣ್ಣವರ, ಚಾಲಕ ಘಟಕದ ಅಧ್ಯಕ್ಷ ಗೌಸುಸಾಬ ಶಿರಹಟ್ಟಿ, ತಾಲೂಕಾ ಕಾರ್ಯದರ್ಶಿ ನಿಯಾಜ ಶೇಖ, ನರೇಗಲ್ ನಗರ ಘಟಕದ ಮುಖಂಡ ಸಿರಾಜ ಹೊಸಮನಿ ಮುಂತಾದವರಿದ್ದರು.
Advertisement