ಬಾಗಲಕೋಟೆ:- ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ, ಆವೇಷ ಯಾಕೋ ನಿಲ್ಲೋ ರೀತಿ ಕಾಣ್ತಿಲ್ಲ. ಈಗಾಗಲೇ ರಾಜ್ಯ ಸರ್ಕಾರ 3300 ರೂ ಬೆಲೆ ಘೋಷಿಸಿದರೂ ಬಾಗಲಕೋಟೆ ರೈತರಿಗೆ ಮಾತ್ರ ಇದು ತೃಪ್ತಿ ನೀಡಿಲ್ಲ.
ಅದರಂತೆ ಬಾಗಲಕೋಟೆಯ ಮುಧೋಳದ ಮಾಹಾಲಿಂಗಪುರ ಪಟ್ಟಣ ಬಳಿಯ ಸಂಗಾನಟ್ಟಿ ಕ್ರಾಸ್ ಬಳಿ ಕಬ್ಬಿನ ಟ್ರ‍್ಯಾಕ್ಟರ್ ಟ್ರೇಲರ್ ಪಲ್ಟಿ ಮಾಡಿ ಕಬ್ಬಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು, ಸಾವಿರಾರು ಟನ್ ಕಬ್ಬು ಬೆಳೆ ಭಸ್ಮವಾಗಿದೆ.
ಆರಂಭದಲ್ಲಿ ನಿಪ್ಪಾಣಿ- ಮಹಾಲಿಂಗಪುರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿ ಟನ್ ಕಬ್ಬಿಗೆ 3,500 ರೂ. ಕೊಡಬೇಕೆಂದು ಆಗ್ರಹಿಸಿದ್ದ ರೈತರು, ಸೈದಾಪುರ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆ ಬಳಿಕ ತಾಳ್ಮೆ ಕಳೆದುಕೊಂಡ ರೈತರು ಮಹಲಿಂಗಪುರ-ನಿಪ್ಪಾಣಿ ರಸ್ತೆಯಲ್ಲಿರುವ ಸೈದಾಪುರ ಸಕ್ಕರೆ ಕಾರ್ಖಾನೆ ಅವರಣದಲ್ಲಿನ ಕಬ್ಬು ತುಂಬಿದ ಟ್ರ‍್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. 50ಕ್ಕೂ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಕಣ್ಣೀರಿಟ್ಟಿದ್ದಾರೆ. ಇದರಿಂದ ಸಾವಿರಾರು ಟನ್ ಕಬ್ಬು ಸುಟ್ಟು ಭಸ್ಮವಾಗಿದೆ. ಸ್ಥಳದಲ್ಲಿ 200ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳನ್ನ ನಿಲ್ಲಿಸಲಾಗಿತ್ತು.
ಸ್ಥಳದಲ್ಲಿ ಪೊಲೀಸರಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ.



