ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳು ಸೊಳ್ಳೆಗಳಿಂದ ಹರಡುತ್ತವೆ. ಪ್ರತಿ ವರ್ಷ ಈ ಸೊಳ್ಳೆಗಳು ಹರಡುವ ರೋಗಗಳಿಂದ ಅನೇಕ ಜನರು ಸಾಯುತ್ತಾರೆ.ಸಂಜೆಯ ವೇಳೆಗೆ ಈ ಸೊಳ್ಳೆಗಳು ಮನೆಯ ಬಾಗಿಲು, ಕಿಟಕಿಗಳ ಮೂಲಕ ಮನೆಯೊಳಗೆ ಬರುತ್ತವೆ. ಒಮ್ಮೆ ಮನೆಯೊಳಗೇ ಬಂದ ಸೊಳ್ಳೆಗಳು ನಂತರ ವಿಪರೀತ ಕಾಟ ಕೊಡಲು ಆರಂಭಿಸುತ್ತವೆ. ಈ ಸೊಳ್ಳೆಗಳು ಮನೆ ಮಂದಿಗೆ ಕಚ್ಚುವ ಮೂಲಕ ಅನಾರೋಗ್ಯಕ್ಕೆ ಗುರಿ ಮಾಡುತ್ತವೆ.
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಸೊಳ್ಳೆಗಳು ಕಡಿಮೆ ಇರುತ್ತದೆ. ಆದರೆ ಈಗ ಮಳೆಯಾಗುತ್ತಿರುವುದರಿಂದ ಸೊಳ್ಳೆಗಳ ಆರ್ಭಟ ಹೆಚ್ಚಾಗಿದೆ. ಇವು ತಮ್ಮ ಸಂತಾನೋತ್ಪತ್ತಿಯನ್ನು ಮಳೆಗಾಲದಲ್ಲಿ ಹೆಚ್ಚಿಸುತ್ತವೆ. ಹೀಗಾಗಿ ಸೊಳ್ಳೆಗಳು ಮನುಷ್ಯರ ಮತ್ತು ಪ್ರಾಣಿಗಳ ರಕ್ತವನ್ನು ಹೀರುತ್ತವೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈಗ ತಿಳಿಯಬೇಕಾಗಿರುವ ಇಂಟ್ರೆಸ್ಟಿಂಗ್ ವಿಚಾರವೆಂದರೆ ಸೊಳ್ಳೆಗಳು ಮನುಷ್ಯರನ್ನು ಕಚ್ಚಿದಾಗ ಎಷ್ಟು ರಕ್ತವನ್ನು ಹೀರುತ್ತದೆ ಎಂಬುವುದು. ನಿಮಗೂ ಇದೇ ಪ್ರಶ್ನೆ ಕಾಡುತ್ತಿದ್ದರೆ ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಸೊಳ್ಳೆ ಒಮ್ಮೆಗೆ ಎಷ್ಟು ರಕ್ತ ಹೀರಬಲ್ಲದು ಗೊತ್ತಾ? ಸೊಳ್ಳೆಗಳು ಸಾಮಾನ್ಯವಾಗಿ ತಮ್ಮ ದೇಹ ತೂಕದ ಮೂರು ಪಟ್ಟು ರಕ್ತವನ್ನು ಕುಡಿಯಬಹುದು. ಸೊಳ್ಳೆಗಳ ಸರಾಸರಿ ತೂಕ 6 ಮಿಗ್ರಾಂ ಇರುತ್ತದೆ. ಒಬ್ಬ ವ್ಯಕ್ತಿಯು ಆಹಾರವನ್ನು ಜೀರ್ಣಿಸಿಕೊಳ್ಳಲು ಮೂರರಿಂದ ನಾಲ್ಕು ಬಾರಿ ಅಗಿಯಬೇಕು. ಆದರೆ ಸೊಳ್ಳೆಗಳಿಗೆ ಹಲ್ಲುಗಳಿಲ್ಲ. ಅವು ಬಾಯಿಯಲ್ಲಿ ಚೂಪಾದ ಘಟಕಗಳನ್ನು ಹೊಂದಿರುತ್ತದೆ. ಇದರ ಮೂಲಕ ರಕ್ತವನ್ನು ಹೀರಿ ಕುಡಿಯುವ ಮೂಲಕ, ಅದು ತಮ್ಮ ಆಹಾರ ಪಡೆಯುತ್ತದೆ
ವಾಸ್ತವವಾಗಿ ಸೊಳ್ಳೆಗಳು ಯಾರನ್ನೂ ಕಚ್ಚದೇ ಬದುಕಬಲ್ಲವು. ಆದರೆ ಹೆಣ್ಣು ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಚಕ್ರವನ್ನು ಪೂರ್ಣಗೊಳಿಸಲು ರಕ್ತದ ಅಗತ್ಯವಿದೆ. ಸೊಳ್ಳೆಗಳಿಗೆ ಮೊಟ್ಟೆ ಇಡಲು ಮತ್ತು ಮೊಟ್ಟೆಗಳನ್ನು ಫಲವತ್ತಾಗಿಸಲು ರಕ್ತದ ಅಗತ್ಯವಿದೆ. ಹಾಗಾಗಿಯೇ ಇದು ಮಾನವ ರಕ್ತವನ್ನು ಹೀರುತ್ತದೆ. ಹಾಗಾಗಿ ಹೆಣ್ಣು ಸೊಳ್ಳೆಗಳು ಮಾತ್ರ ಹೆಚ್ಚಾಗಿ ಮನುಷ್ಯರನ್ನು ಕಚ್ಚುತ್ತವೆ
ನಂತರ ರಕ್ತವು ಜೀರ್ಣವಾದಾಗ, ಮೊಟ್ಟೆಗಳು ರೂಪುಗೊಳ್ಳುತ್ತವೆ. ಹೆಣ್ಣು ಸೊಳ್ಳೆಯು ಮೊಟ್ಟೆಗಳನ್ನು ನೀರಿಗೆ ಬಿಡುತ್ತದೆ. ಇದು ಸೊಳ್ಳೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ ಹಿಂದಿನಕಾಲದಲ್ಲಿ ಜನ ಹೆಚ್ಚಾಗಿ ಸೊಳ್ಳೆಗಳು ಮತ್ತು ಅವು ಉಂಟು ಮಾಡುವ ರೋಗಗಳಿಂದ ಸಾಯುತ್ತಿದ್ದರು.
ಸೊಳ್ಳೆ ಕಾಟಕ್ಕೆ ಮನೆಮದ್ದು: ಬೇವಿನ ಎಣ್ಣೆ: ಮನೆಮದ್ದುಗಳನ್ನು ಬಳಸಿ ಸೊಳ್ಳೆಗಳನ್ನು ಹೋಗಲಾಡಿಸಲು ಬೇವಿನ ಎಣ್ಣೆ ಉತ್ತಮ ಆಯ್ಕೆಯಾಗಿದೆ. ಚರ್ಮದ ಮೇಲೆ ಸೊಳ್ಳೆ ನಿವಾರಕ ಕ್ರೀಮ್ ಬಳಸದೆ ಬೇವಿನ ಎಣ್ಣೆಯನ್ನು ಬಳಸಬಹುದು. ಇದು ಸೊಳ್ಳೆಗಳನ್ನು ನಿಮ್ಮಿಂದ ದೂರವಿಡುತ್ತದೆ
ಪುದೀನಾ ಎಣ್ಣೆ: ನಿಮ್ಮ ಚರ್ಮಕ್ಕೆ ಬೇವಿನ ಎಣ್ಣೆಯನ್ನು ಬಳಸಲು ನೀವು ಬಯಸದಿದ್ದರೆ, ಕೆಲವು ಹನಿ ಪುದೀನಾ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಮತ್ತು ನಿಮ್ಮ ಚರ್ಮಕ್ಕೆ ಸಿಂಪಡಿಸಿ. ಇದು ಸೊಳ್ಳೆಗಳನ್ನು ನಿಮ್ಮಿಂದ ದೂರವಿಡುತ್ತದೆ.
ತುಳಸಿ ಎಲೆ: ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ನೀವು ತುಳಸಿ ಎಲೆಗಳನ್ನು ಮನೆಮದ್ದುಗಳಲ್ಲಿ ಬಳಸಬಹುದು. ಶುಭ ಸೂಚನೆಯಂತೆ ಮನೆಯ ಕಿಟಕಿ, ಬಾಗಿಲು ಮತ್ತಿತರ ಕಡೆ ತುಳಸಿ ಎಲೆಗಳನ್ನು ಇಡಬಹುದು. ಅವು ಸೊಳ್ಳೆಗಳು ಮನೆಗೆ ಬರದಂತೆ ತಡೆಯುತ್ತವೆ.