ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ದಾಖಲೆಗಳು ಕಾಂಗ್ರೆಸ್ ನಾಯಕರಿಂದಲೇ ಬಂದಿವೆ: ಸ್ನೇಹಮಯಿ ಕೃಷ್ಣ

0
Spread the love

ಮೈಸೂರು: ಕಾಂಗ್ರೆಸ್ ನಾಯಕರು ಕೊಟ್ಟಿರುವ ದಾಖಲೆಗಳು ನನ್ನ ಹೋರಾಟದ ವೇಗ ಹೆಚ್ಚಿಸಿವೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೊಸ ಬಾಂಬ್‌ ಸಿಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು,

Advertisement

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಿಂದ ನನಗೆ ಅತಿ ಹೆಚ್ಚಿನ ದಾಖಲೆಗಳು ಕಾಂಗ್ರೆಸ್ ನಾಯಕರಿಂದಲೇ ಬಂದಿವೆ. ಕಾಂಗ್ರೆಸ್ ನಾಯಕರು ಕೊಟ್ಟಿರುವ ದಾಖಲೆಗಳು ನನ್ನ ಹೋರಾಟದ ವೇಗ ಹೆಚ್ಚಿಸಿವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲೂ ಸಿಎಂ ಭ್ರಷ್ಟಾಚಾರದ ಬಗ್ಗೆ ಅಸಮಾಧಾನ ಇರುವ ಜನ ಹೆಚ್ಚಿದ್ದಾರೆ. ಪಕ್ಷದ ಒಳಗೆ ಅದನ್ನು ತೋರಿಸಲು ಅವರಿಗೆ ಆಗಲ್ಲ. ಹೀಗಾಗಿ, ನನಗೆ ದಾಖಲೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಯಾವ ಹಂತದ ನಾಯಕರು, ಅವರು ಯಾರು ಅನ್ನೋದನ್ನು ನಾನು ಹೇಳುವುದಿಲ್ಲ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here