ಕೊಪ್ಪಳ:- ಕೊಪ್ಪಳದ ಹಿರೇವಂಕಲಕುಂಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂತಾನಹರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ತಾಯಿ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
23 ವರ್ಷದ ಮಲ್ಲಮ್ಮ ಕಲ್ಲೂರ್ ಮೃತ ಮಹಿಳೆ. ಮಲ್ಲಮ್ಮ ಅವರಿಗೆ ಎರಡೂವರೆ ವರ್ಷದ ಹಾಗೂ ಐದು ತಿಂಗಳ ಎರಡು ಮಕ್ಕಳಿದ್ದು, ಈ ಹಿನ್ನೆಲೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು.
ಸೋಮವಾರ ಸಂತಾನಹರಣ ಚಿಕಿತ್ಸೆಗೆಂದು ಕೊಪ್ಪಳದ ಹಿರೇವಂಕಲಕುಂಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಮಂಗಳವಾರ ಸಂತಾನಹರಣ ಚಿಕಿತ್ಸೆ ವೇಳೆ ವೈದ್ಯರ ಎಡವಟ್ಟಿನಿಂದಾಗಿ ಮಲ್ಲಮ್ಮ ಅವರ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಾರ್ಗಮಧ್ಯೆಯೇ ಮಲ್ಲಮ್ಮ ಸಾವನ್ನಪ್ಪಿದ್ದಾರೆ.
ಸದ್ಯ ಅನಸ್ತೇಶಿಯಾ ನೀಡದೇ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆಂದು ಮಲ್ಲಮ್ಮ ಕುಟುಂಬಸ್ಥರು ಆರೋಪಿಸಿದ್ದಾರೆ.