ಹಾಸನ:- ಜಿಲ್ಲೆಯ ಅರಕಲಗೂಡಿನ ರಾಮನಾಥಪುರದಲ್ಲಿ ಮಗಳ ಜೀವ ಉಳಿಸಲು ಹೋಗಿ ಅಳಿಯನಿಂದ ಅತ್ತೆ ಹತ್ಯೆಯಾದ ಘಟನೆ ಜರುಗಿದೆ.
ಫೈರೋಜಾಅಹದ್ (55) ಕೊಲೆಯಾದ ಮಹಿಳೆ. ರಸೂಲ್ ಕೊಲೆಗೈದ ಆರೋಪಿಯಾಗಿದ್ದಾನೆ. ಈತ ಪತ್ನಿಗೆ ನೀಡುತ್ತಿದ್ದ ಕಿರಿಕುಳದಿಂದ ಬೇಸತ್ತ ಅತ್ತೆ, ತನ್ನ ಮಗಳನ್ನು ತವರು ಮನೆಗೆ ಕರೆದುಕೊಂಡು ಬರುತ್ತಿದ್ದರು. ಇದರಿಂದ ಕೋಪಗೊಂಡ ಅಳಿಯ ಹಿಂಬಾಲಿಸಿಕೊಂಡು ಬಂದು ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ಮಗಳ ರಕ್ಷಣೆಗೆ ಬಂದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
ಪತ್ನಿ ಸಮೀನಾ ಹಾಗೂ ಆಕೆಯ ಅಕ್ಕ ಸುಮಯ್ಯತಾಜಾ ಮೇಲೂ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



