ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ IV ಫ್ಲೂಯಿಡ್ ನ ವರದಿ ಅಧಿಕಾರಿಗಳ ಕೈ ಸೇರಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸಲು ಗ್ಲೂಕೋಸ್ ಕಾರಣವಾಗಿದೆ. ಯೋಗ್ಯವಲ್ಲದ ಐವಿ ಫ್ಲೂಯಿಡ್ ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
ಫ್ಲೂಯಿಡ್‌ನಲ್ಲಿ ಎಂಡೋ ಟಾಕ್ಸಿನ್ ಎಂಬ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದೆ. ಇದು ಸಾವಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾ ಎಂದು ಹೇಳಲಾಗುತ್ತದೆ. ಬಾಣಂತಿಯರಿಗೆ ಕೊಟ್ಟಿದ್ದ ಗ್ಲೂಕೋಸ್ ನಲ್ಲಿ ನ್ಯೂನತೆ ಕಂಡು ಬಂದಿದೆ. ಇನ್ನೂ 3 ಬ್ಯಾಚ್ ಫ್ಲೂಯಿಡ್ ನಲ್ಲಿ 1 ಬ್ಯಾಚ್ ನ ವರದಿ ಇದೀಗ ಅಧಿಕಾರಿಗಳ ಕೈ ಸೇರಿದೆ. ಇನ್ನೂ ಎರಡು ಬ್ಯಾಚ್ ನ ವರದಿ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಬರಲಿದೆ.