ಅಮ್ಮ ನಗುಮುಖದಿ ಆಕರ್ಷಿಸಿ
ಪ್ರೀತಿ ಪ್ರೇಮದಿಂದ ಸ್ಪಂದಿಸಿ
ನವಮಾಸ ಹೊತ್ತು ಹೆತ್ತು ಸಂಪೋಷಿಸಿ
ಅಮೃತವೆಂಬ ಎದೆ ಹಾಲು ಕುಡಿಸಿ (1)
ಆಶ್ರಯದೊಂದಿಗೆ ನೀತಿ ನಿಯಮ ಪಾಲಿಸಿ
ಸರಿಯಾದ ಜ್ಞಾನ ಮಾರ್ಗದಲ್ಲಿ ಕೈ ಹಿಡಿದು ನಡೆಸಿ
ಬಂಧು ಬಾಂಧವ್ಯದೊಂದಿಗೆ ಸಕಲ ಜವಾಬ್ದಾರಿ ವಹಿಸಿ
ಸಮಾಜ ಕುಟುಂಬ ಬಂಧುತ್ವಗಳ ಸೇತುವೆ ಬೆಳಸಿ (2)
ಮಕ್ಕಳು ಮೊಮ್ಮಕ್ಕಳೊಂದಿಗೆ ಸಂದರ್ಶಸಿ
ಹೊತ್ತು ಹೊತ್ತಿಗೂ ಬುತ್ತಿಯನ್ನು ಉಣಿಸಿ
ಕರುಳ ಕುಡಿಯ ಕಂದಮ್ಮರನ್ನು ಪಾಲಿಸಿ ಮುದ್ದಿಸಿ
ತನ್ನ ಸಕಲ ಸೌಕರ್ಯಗಳನ್ನು ಮಕ್ಕಳಿಗಾಗಿ ಸಮರ್ಪಿಸಿ (3)
ನೋವು ನಲುವುವಿನಲ್ಲಿ ಅಮ್ಮನನ್ನು ನೆನೆಸಿ
ಹಗಲು ಇರುಳಿನಲ್ಲೂ ನಮ್ಮ ಏಳಿಗೆಗಾಗಿ ಶ್ರಮಿಸಿ
ನಿಸ್ವಾರ್ಥದಿಂದ ಸದಾ ನಮ್ಮನ್ನು ಹಾರೈಸಿ
ಅಮ್ಮನ ಅದ್ಭುತ ಶಕ್ತಿಯಿಂದ ಹೃದಯವನ್ನು ಅರಳಿಸಿ
ಅಮ್ಮ ಅಮ್ಮಾ ಎಂದರೆ ಸಕಲ ಕಾಯಿಲೆಗಳು ವಾಸಿ
ಅಮ್ಮ ಸದಾ ನಾನು ನಿನಗೆ ಚಿರಋಣಿ ಅಮ್ಮ (4)
– ಸುವರ್ಣ ಮಾಳಗಿಮನಿ (ಬಸುಮಾ)
ಜಾನಪದ ವಿವಿ ಸಂಶೋಧನಾರ್ಥಿ,
ಶಿಗ್ಗಾವ, ಹಾವೇರಿ.