ಗದಗ: ನೇಣು ಬಿಗಿದ ಸ್ಥಿತಿಯಲ್ಲಿ ಐದು ತಿಂಗಳ ಬಾಣಂತಿಯ ಶವ ಪತ್ತೆಯಾದ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಜರುಗಿದೆ.
Advertisement
ನರಗುಂದ ಪಟ್ಟಣದ ಹಗೆದಕಟ್ಟಿಯ ನಿವಾಸಿ, ಕಳೆದ ಮೂರು ದಿನಗಳ ಹಿಂದೆ ಅಷ್ಟೇ ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದ ಪವಿತ್ರಾ (25) ಎಂಬುವವರೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಣಂತಿ.
ಪವಿತ್ರಾಳ ಕುತ್ತಿಗೆ ಹಿಸುಕಿ ನೇಣು ಬಿಗಿದು ಹತ್ಯೆ ಮಾಡಿರುವ ಆರೋಪ ಗಂಡ ಹಾಗೂ ಆತನ ಕುಟುಂಬಸ್ಥರ ಮೇಲೆ ಕೇಳಿ ಬಂದಿದೆ.
ಗಂಡ ಹರೀಶ್ ಕಲ್ಲಕುಟಿಕರ್, ಮಾವ ಮೂಕಪ್ಪ, ಅತ್ತೆ ಸೋಮವ್ವ ವಿರುದ್ಧ ಕೊಲೆ ಆರೋಪ ಮಾಡಲಾಗಿದ್ದು, ವರದಕ್ಷಿಣೆ ಹಣ ತರುವಂತೆ ನಿತ್ಯ ಕಿರುಕುಳ ನೀಡುತ್ತಿದ್ದರಂತೆ. ನಿನ್ನೆ ಸಂಜೆ ಮನೆಯಲ್ಲಿ ಪವಿತ್ರಾ ಮೇಲೆ ಹಲ್ಲೆ ಮಾಡಿ ನೇಣುಬಿಗಿದು ಕೊಲೆ ಮಾಡಿದ್ದಾರೆಂದು ನರಗುಂದ ಪೊಲೀಸ್ ಠಾಣೆಯಲ್ಲಿ ಯುವತಿ ಕುಟುಂಬಸ್ಥರು ಕೊಲೆ ಕೇಸ್ ದಾಖಲಿಸಿದ್ದಾರೆ.