ಹಾಸನ: ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ನಗರದ ಹಲವೆಡೆ ವಾಹನ ಸವಾರರು ಪರಿತಪಿಸುಂವತಾಗಿದೆ. ನಗರದ ಕೆ.ಆರ್. ಪುರಂ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಅಪಘಾತ ಸಂಭವಿಸುತ್ತಿದ್ದು ಈ ಬಗ್ಗೆ ಅನೇಕ ತಿಂಗಳುಗಳಿಂದ ನಗರಸಭೆ ಆಯುಕ್ತರ ಗಮನಕ್ಕೆ ಹಲವಾರು ಬಾರಿ ತರಲಾಗಿದೆ.
Advertisement
ಪ್ರತಿ ಬಾರಿಯೂ ಇಂದು ನಾಳೆ ಎಂಬ ಭರವಸೆಯಲ್ಲೇ ಆಯುಕ್ತರು ಕಾಲ ಕಳೆಯುತ್ತಿದ್ದು ಇಂದೂ ಕೂಡ ಅಪಘಾತವಾಗಿ ಮೂವರ ಸ್ಥಿತಿ ಚಿಂತಾಜನಕವಾಗುವಂತಾಗಿದೆ.
ಇದಕ್ಕೆಲ್ಲಾ ನಗರಸಭೆ ಅಧಿಕಾರಿಗಳೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.